ವಿಟ್ಲ : ಮಾರ್ಚ್ ತಿಂಗಳಲ್ಲಿ ಎರಡು ಮಳೆ ಬಂತು. ಈ ಎರಡು ಮಳೆಗೂ ವಿಟ್ಲ ಪೇಟೆಯ ಚರಂಡಿಗಳಲ್ಲಿ ನೀರು ಹರಿಯಲಿಲ್ಲ. ಮುಖ್ಯ ರಸ್ತೆಯಲ್ಲೇ ನೀರು ಹರಿದು ಹೋಗುತ್ತಿತ್ತು. ಆರಂಭದ ಮಳೆಗೇ ಪರಿಸ್ಥಿತಿ ಹೀಗಾದರೆ ಇನ್ನು ಮಳೆಗಾಲದಲ್ಲಿ ಪರಿಸ್ಥಿತಿ ಹೇಗಿರಬಹುದು ? ಪ್ಲಾಸ್ಟಿಕ್, ಕಸಕಡ್ಡಿಗಳು ರಸ್ತೆಯಲ್ಲಿ ಬಿದ್ದು ವಾಸನೆಯನ್ನು ಬೀರುತ್ತಿವೆ. ರೋಗ ಹರಡುವ ಸಾಧ್ಯತೆಯಿದೆ. ವಿಟ್ಲ ಪೇಟೆಯಲ್ಲಾಗಲೀ ಸುತ್ತಮುತ್ತಲಿನ ಪರಿಸರದಲ್ಲಾಗಲೀ ಚರಂಡಿ ವ್ಯವಸ್ಥೆ ಸರಿಯಿಲ್ಲ. ಚರಂಡಿ ಮಾತ್ರವಲ್ಲ, ವಿದ್ಯುತ್ ಕಂಬಗಳ ಸ್ಥಳಾಂತರವಾಗಿಲ್ಲ.
ಅಡ್ಡಾದಿಡ್ಡಿ ಪಾರ್ಕಿಂಗ್, ಬಸ್ ನಿಲ್ದಾಣದಲ್ಲಿ ಬಸ್‌ಗಳು ನಿಲ್ಲದೇ ಅಲ್ಲಲ್ಲಿ ಜನರನ್ನು ಹತ್ತಿಸಿಕೊಳ್ಳುವುದು,ಟ್ರಾಫಿಕ್ ಜಾಮ್ ಸಮಸ್ಯೆ ಸರಿಪಡಿಸಲು ಅಧಿಕಾರಿಗಳ ನಿರ್ಲಕ್ಷ್ಯವೇ ಮುಖ್ಯ ಕಾರಣ. ಈ ಸಮಸ್ಯೆ ಸರಿಪಡಿಸಲು ಯಾರೂ ಮುಂದೆ ಬರುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇವುಗಳನ್ನು ಬರೆದರೆ ಒಂದಿಷ್ಟು ಭರವಸೆಗಳು ದೊರೆಯುತ್ತವೆ. ಆಮೇಲೆ ಹಿಂದಿನಂತೆಯೇ ಸ್ಥಿತಿ ಇರುತ್ತದೆ. ಈ ಕುರಿತು ಸಂಬಂಧಪಟ್ಟವರು ಗಮನಹರಿಸಬೇಕು.