Monday, January 20, 2025
ಸುದ್ದಿ

ಆಶ್ರಮದಲ್ಲಿ ಚಹಾ ಸೇವಿಸಿದ ಇಬ್ಬರು ಸಾಧುಗಳ ಸಾವು: ತನಿಖೆಗೆ ಆಗ್ರಹ – ಕಹಳೆ ನ್ಯೂಸ್

ಚಹಾ ಸೇವಿಸಿದ ಮೂವರು ಸಾಧುಗಳ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಸಾಧುವನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಉತ್ತರ ಪ್ರದೇಶದ ಮಥುರದಲ್ಲಿ ನಡೆದಿದೆ.

ಘಟನೆಯಲ್ಲಿ ಗುಲಾಬ್ ಸಿಂಗ್ ಮತ್ತು ಶ್ಯಾಮ್ ಸುಂದರ್ ಎಂಬ ಇಬ್ಬರು ಸಾಧುಗಳು ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

60 ವರ್ಷದ ಗುಲಾಬ್ ಸಿಂಗ್ ಚಹಾ ಕುಡಿದ ಸ್ಥಳದಲ್ಲೇ ಮೃತಪಟ್ಟರೆ, 61 ವರ್ಷದ ಶ್ಯಾಮ್ ಸುಂದರ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ರಾಮ್ ಬಾಬು ಎಂಬ ಮತ್ತೊಬ್ಬ ಸಾಧು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುಲಾಬ್ ಸಿಂಗ್ ಸೋದರ ಗೋಪಾಲ್ ದಾಸ್, ಸಾಧುಗಳಿಗೆ ವಿಷವಿಕ್ಕಿ ಹತ್ಯೆಗೈಯ್ಯಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಕೋಸಿ ಕಲಾನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.