Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಈಶ್ವರಮಂಗಲದ ಹನುಮಗಿರಿ ಕ್ಷೇತ್ರದಲ್ಲಿ ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮ-ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮ ಈಶ್ವರಮಂಗಲದ ಹನುಮಗಿರಿ ಕ್ಷೇತ್ರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಧರ್ಮ ಶ್ರೀ ಪ್ರತಿಷ್ಠಾನ ಹನುಮಗಿರಿಯ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ, ಪ್ರತಿಯೊಂದು ಕ್ಷೇತ್ರದಲ್ಲೂ ನಾವೆಲ್ಲರು ಸ್ವಾವಲಂಬಿಗಳಾದರೆ ನಮ್ಮ ದೇಶ ವಿಶ್ವಗುರು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ, ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತ ಎಂಬ ಪರಿಕಲ್ಪನೆಯನ್ನು ನಮಗೆ ನೀಡಿದ್ದಾರೆ, ಅದರಲ್ಲಿ ಜೇನು ಕೃಷಿಗೆ ವಿಶೇಷ ಮಹತ್ವವನ್ನು ನೀಡಿದ್ದಾರೆ.

ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಜೇನು ಸಾಕಾಣಿಕೆಯಿಂದ ಜೇನಿನ ಉತ್ಪಾದನೆಯೊಂದಿಗೆ ಕೃಷಿಗೆ ಪೂರಕವಾಗಿ ಪರಾಗಸ್ಪರ್ಶ ಚೆನ್ನಾಗಿ ಆಗಿ ಕೃಷಿ ಉತ್ಪತ್ತಿ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷದ್ ಹಮ್ಮಿಕೊಂಡ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿದೆ ಎಂದರು..

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ ಕೃಷ್ಣಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಕೃಷಿ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿ ಆಗುವುದರೊಂದಿಗೆ, ಆರ್ಥಿಕವಾಗಿ, ಧಾರ್ಮಿಕವಾಗಿ ಹಾಗು ಸಾಂಸ್ಕೃತಿಕವಾಗಿ ಉನ್ನತಿ ಸಾಧಿಸಿ ಭಾರತವನ್ನು ಮತ್ತೊಮ್ಮೆ ಪರಮವೈಭವ ಸ್ಥಿತಿಗೆ ಒಯ್ಯಬೇಕೆಂಬ ಉದ್ದೇಶದೊಂದಿಗೆ ವಿಶ್ವ ಹಿಂದೂ ಪರಿಷದ್ ಕೆಲಸ ಮಾಡುತ್ತಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭ ವಿಹಿಂಪ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ ಎಸ್, ವಿಹಿಂಪ ಪಂಚಮುಖಿ ಶಾಖೆ ಹನುಮಗಿರಿಯ ಅಧ್ಯಕ್ಷ ದಿವಾಕರ ಗೌಡ, ಸಂಪನ್ಮೂಲ ವ್ಯಕ್ತಿ ರಾಧಾಕೃಷ್ಣ ಕೋಡಿ ಉಪಸ್ಥಿತರಿದ್ದರು. ಬಜರಂಗದಳ ಕಡಬ ಪ್ರಖಂಡ ಸಂಚಾಲಕ ಮೂಲಚಂದ್ರ ಕಡಬ ಸ್ವಾಗತಿಸಿ ವಿಹಿಂಪ ಪುತ್ತೂರು ಪ್ರಖಂಡ ಸಹ ಕಾರ್ಯದರ್ಶಿ ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು