Monday, January 20, 2025
ಹೆಚ್ಚಿನ ಸುದ್ದಿ

ಟ್ವೀಟರ್ ನಲ್ಲಿ 1 ಮಿಲಿಯನ್ ಫಾಲೋವರ್ಸ್ : ದಾಖಲೆ ಬರೆದ `ಭಾರತೀಯ ರಿಸರ್ವ್ ಬ್ಯಾಂಕ್’! – ಕಹಳೆ ನ್ಯೂಸ್

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಒಂದು ಮಿಲಿಯನ್ ಗಿಂತಲೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವದ ಮೊದಲ ಹಣಕಾಸು ಪ್ರಾಧಿಕಾರವಾಗಿ ಹೊರಹೊಮ್ಮಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರ್ ಬಿಐ ವಿಶ್ವದ ಅತ್ಯಂತ ಶಕ್ತಿಶಾಲಿ ಕೇಂದ್ರ ಬ್ಯಾಂಕ್ ಗಳಾದ ಯುಎಸ್ ಫೆಡರಲ್ ರಿಸರ್ವ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಗಳನ್ನು ಹಿಂದಿಕ್ಕಿ ಸಾಮಾಜಿಕ ಜಾಲತಾಣದಲ್ಲಿ ಒಂದು ಮಿಲಿಯನ್ ಗಿಂತಲೂ ಹೆಚ್ಚು ಹಿಂಬಾಲಕರನ್ನು ಹೊಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾನುವಾರದ ವೇಳೆಗೆ ಆರ್ ಬಿಐ ನ ಟ್ವೀಟರ್ ಖಾತೆಯನ್ನು ವಿಶ್ವದಾದ್ಯಂತ 10,00,513 ಮಂದಿ ಅನುಸರಿಸುತ್ತಾರೆ. 85 ವರ್ಷದ ರಿಸರ್ವ್ ಬ್ಯಾಂಕ್ ಕೂಡ ಟ್ವಿಟರ್ ಜಗತ್ತಿಗೆ ತಡವಾಗಿ ಬಂದಿರುವುದರಿಂದ ಈ ಸಾಧನೆ ಗಮನ ಸೆಳೆಯಿತು. 2012ರ ಜನವರಿಯಲ್ಲಿ ಖಾತೆ ಸೃಷ್ಟಿಸಿತು. ಆರ್ ಬಿಐನ ಟ್ವಿಟರ್ ಹ್ಯಾಂಡಲ್ ‘@RBI’ನಲ್ಲಿ ಲಭ್ಯವಾದ ಇತ್ತೀಚಿನ ಮಾಹಿತಿಪ್ರಕಾರ, 2020ರ ಸೆಪ್ಟೆಂಬರ್ 27ರಂದು 9.66 ಲಕ್ಷ ದಿಂದ ಭಾನುವಾರದ ವರೆಗೆ 10 ಲಕ್ಷಕ್ಕೆ ಏರಿಕೆಯಾಗಿದೆ. ‘ಆರ್ ಬಿಐ ಟ್ವಿಟರ್ ಖಾತೆ ಇಂದು 1 ಮಿಲಿಯನ್ ಹಿಂಬಾಲಕರನ್ನು ತಲುಪಿದೆ. ಹೊಸ ಮೈಲಿಗಲ್ಲು . ಆರ್ ಬಿಐನಲ್ಲಿರುವ ನನ್ನ ಎಲ್ಲಾ ಸಹೋದ್ಯೋಗಿಗಳಿಗೆ ಅಭಿನಂದನೆಗಳು’ ಎಂದು ಗವರ್ನರ್ ಶಕ್ತಿಕಾಂತ ದಾಸ್ ಭಾನುವಾರ ಟ್ವೀಟ್ ಮಾಡಿದ್ದಾರೆ.