Recent Posts

Monday, January 20, 2025
ಹೆಚ್ಚಿನ ಸುದ್ದಿ

ಮಹಾತ್ಮ ಗಾಂಧೀಜಿ ಮರಿ ಮೊಮ್ಮಗ ಕೊರೊನಾಗೆ ಬಲಿ – ಕಹಳೆ ನ್ಯೂಸ್

ಮಹಾತ್ಮ ಗಾಂಧೀಜಿ ಅವರ ಮರಿಮೊಮ್ಮಗ ಸತೀಶ್ ಧುಪೆಲಿಯಾ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದ ಸತೀಶ್ ಧುಪೆಲಿಯಾ 3 ದಿನಗಳ ನಂತರ 66ನೇ ಜನ್ಮ ದಿನ ಆಚರಿಸಿಕೊಳ್ಳಬೇಕಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸತೀಶ್ ಅವರ ಸೋದರಿ ಉಮಾ ಧುಪೆಲಿಯಾ ಸೋದರನ ಸಾವನ್ನು ಖಚಿತಪಡಿಸಿದ್ದು, ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ಪ್ರೀತಿಯ ಅಣ್ಣ ನಮ್ಮನ್ನು ಅಗಲಿದ್ದಾನೆ. ನ್ಯೂಮೇನಿಯಾ ಆಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ವೇಳೆ ಅವರಿಗೆ ಕೋವಿಡ್-19 ಸೋಂಕು ಸಹ ತಗುಲಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಸೋದದ ಕಾರ್ಡಿಯಾಕ್ ಅರೆಸ್ಟ್ ನಿಂದ ಭಾನುವಾರ ಸಂಜೆ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸತೀಶ್ ಅವರ ಇನ್ನೋರ್ವ ಸೋದರಿ ಕೀರ್ತಿ ಮೆನನ್ ಜೊಹಾನ್ಸಬರ್ಗ್ ನಲ್ಲಿ ವಾಸವಾಗಿದ್ದಾರೆ. ಗಾಂಧೀಜಿ ಅವರ ಸ್ಮರಾಣರ್ಥವಾಗಿ ಕೈಗೊಂಡ ಪ್ರೊಜೆಕ್ಟ್ ಗಳಲ್ಲಿ ಕೀರ್ತಿ ಮೆನನ್ ತೊಡಗಿಕೊಂಡಿದ್ದಾರೆ.