Saturday, November 16, 2024
ರಾಜ್ಯ

‘ದೂರದರ್ಶನ,ಯೂಟ್ಯೂಬ್‌,ವಾಟ್ಸಾಪ್‌ ತರಗತಿ ಮುಂದುವರೆಸುತ್ತೇವೆ’: ಸುರೇಶ್ ಕುಮಾರ್ – ಕಹಳೆ ನ್ಯೂಸ್

ಬೆಂಗಳೂರು: ಚಳಿಗಾಲದಲ್ಲಿ ಕೊರೊನಾ ಸೋಂಕು ಉಲ್ಭಣವಾಗುವ ಸಾಧ್ಯತೆಯಿದ್ದು, ರಾಜ್ಯದಲ್ಲಿ ಡಿಸೆಂಬರ್‌ ಅಂತ್ಯದವರೆಗೆ ಶಾಲೆ ಮತ್ತು ಪದವಿ ಪೂರ್ವ ವಿಶ್ವ ವಿದ್ಯಾಲಯಗಳನ್ನ ಪ್ರಾರಂಭಿಸೋಲ್ಲ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಜ್ಞರು ಮತ್ತು ಆರೋಗ್ಯ ಇಲಾಖೆಯ ಮೇರೆಗೆ ಶಾಲೆಗಳನ್ನ ತೆರೆಯುವ ನಿರ್ಧಾರವನ್ನ ಕೈಬಿಟ್ಟಿದ್ದು, ಡಿಸೆಂಬರ್‌ ಅಂತ್ಯದಲ್ಲಿ ಮತ್ತೊಮ್ಮೆ ಸಭೆ ನಡೆಸಲಾಗುತ್ತೆ ನಂತ್ರ ಜನವರಿಯಲ್ಲಿ ಶಾಲೆ ಪ್ರಾರಂಭಿಸುವೂದೋ ಬೇಡ್ವೋ ಎನ್ನುವ ನಿರ್ಧಾರ ಕೈಗೊಳ್ಳಲಾಗುತ್ತೆ ಎಂದು ಸಚಿವರು ತಿಳಿಸಿದ್ದಾರೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಅಲ್ಲಿಯವರೆಗೆ ಈಗಿನಂತೆಯೇ ದೂರದರ್ಶನ, ಯೂಟ್ಯೂಬ್‌ ಮತ್ತು ವಾಟ್ಸಾಪ್‌ ಮೂಲಕ ತರಗತಿಗಳನ್ನ ಮುಂದುವರೆಸಲಾಗುವುದು ಎಂದು ಸಚಿವ ಸುರೇಶ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಇಂದು ರಾಜ್ಯದಲ್ಲಿ ಶಾಲೆ ಆರಂಭಿಸುವ ಕುರಿತು ಸಿಎಂ ನೇತೃತ್ವದಲ್ಲಿ ಶಿಕ್ಷಣ ಸಚಿವರು, ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಸಭೆ ನಡೆಸಲಾಯ್ತು. ಈ ಸಭೆಯಲ್ಲಿ ರಾಜ್ಯದಲ್ಲಿ ಮುಂದಿನ ವರ್ಷದವರೆಗೆ ಶಾಲೆಗಳು ಸೇರಿ ಪದವಿ ಪೂರ್ವ ವಿದ್ಯಾಲಯಗಳು ಆರಂಭಸುವುದಿಲ್ಲ ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು