Recent Posts

Saturday, November 16, 2024
ಹೆಚ್ಚಿನ ಸುದ್ದಿ

‘ರಾಜ್ಯ ಸರ್ಕಾರ’ದಿಂದ 2021ರ ಸಾರ್ವತ್ರಿಕ ‘ರಜಾ ದಿನ’ಗಳ ಪಟ್ಟಿ ಬಿಡುಗಡೆ: ಸ್ವಾತಂತ್ರ್ಯೋತ್ಸವ, ಕ್ರಿಸ್​ಮಸ್ʼಗಿಲ್ಲ ರಜೆ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯ ಸರ್ಕಾರ ಪ್ರತಿ ವರ್ಷದಂತೆ ಈ ವರ್ಷವೂ ಸಾರ್ವತ್ರಿಕ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದ್ದು, ಆ ಪ್ರಕಾರ 2021ನೇ ಸಾಲಿಗೆ 20 ಸಾರ್ವತ್ರಿಕ ರಜಾದಿನಗಳನ್ನ ಸರ್ಕಾರ ಘೋಷಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರದ ಆದೇಶದಂತೆ, 2021ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿ ಜನವರಿ 14ರ ಮಕರ ಸಂಕ್ರಾಂತಿಯಿಂದ ಆರಂಭವಾಗಿ ನವೆಂಬರ್ 22ರ ಕನಕದಾಸ ಜಯಂತಿಯಂದು ಮುಕ್ತಾಯಗೊಳ್ಳುತ್ತದೆ. ಈ ಮಧ್ಯೆ ಗಣರಾಜ್ಯೋತ್ಸವ, ಮಹಾಶಿವರಾತ್ರಿ, ಗುಡ್​ಫ್ರೈಡೇ, ಯುಗಾದಿ, ಅಂಬೇಡ್ಕರ್ ಜಯಂತಿ, ಕಾರ್ಮಿಕರ ದಿನಾಚರಣೆ, ಬಸವ ಜಯಂತಿ, ಅಕ್ಷಯ ತೃತೀಯ, ರಮ್ಜಾನ್​, ಬಕ್ರೀದ್, ಮೊಹರಂ, ವರಸಿದ್ಧಿ ವಿನಾಯಕ ವ್ರತ, ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ, ಆಯುಧಪೂಜೆ, ವಿಜಯದಶಮಿ, ವಾಲ್ಮೀಕಿ ಜಯಂತಿ, ಈದ್​ ಮಿಲಾದ್​, ಕರ್ನಾಟಕ ರಾಜ್ಯೋತ್ಸವ, ನರಕ ಚತುರ್ದಶಿ, ಬಲಿಪಾಡ್ಯಮಿ, ದೀಪಾವಳಿ ರಜೆಗಳು ಈ ಪಟ್ಟಿಯಲ್ಲಿವೆ.
ಕರ್ನಾಟಕ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮಹಾವೀರ ಜಯಂತಿ, ಸ್ವಾತಂತ್ರ್ಯೋತ್ಸವ, ಕ್ರಿಸ್​ಮಸ್ ರಜೆಗಳಿಲ್ಲ. ಇನ್ನು ಸರ್ಕಾರ ಸ್ಪಷ್ಟನೆ ನೀಡಿದ್ದು, ಮಹಾವೀರ ಜಯಂತಿ( ಏಪ್ರಿಲ್​ 25) ಹಾಗೂ ಸ್ವಾತಂತ್ರ್ಯೋತ್ಸವ (ಆಗಸ್ಟ್​ 15) ಎರಡೂ ಭಾನುವಾರದಂದು ಮತ್ತು ಕ್ರಿಸ್​ಮಸ್​ ರಜಾದಿನವಾದ ನಾಲ್ಕನೇ ಶನಿವಾರದಂದು ಬರುವುದರಿಂದ ಅವುಗಳನ್ನ ಸಾರ್ವತ್ರಿಕ ರಜಾದಿನಗಳ ಪಟ್ಟಿಯಲ್ಲಿ ಸೇರಿಸಿಲ್ಲ ಎಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು