Tuesday, January 21, 2025
ಸುದ್ದಿ

ಮಂಗಳೂರು: ಯುವಕನ ಮೇಲೆ ತಲ್ವಾರ್ ದಾಳಿ – ಯುವಕ ಗಂಭೀರ -ಕಹಳೆ ನ್ಯೂಸ್

ಮಂಗಳೂರು: ನಗರದ ಫಳ್ನೀರ್ ನ ಯುನಿಟಿ ಆಸ್ಪತ್ರೆ ಬಳಿ ಯುವಕನ ಮೇಲೆ ತಂಡವೊಂದು ಸೋಮವಾರ ತಡರಾತ್ರಿ ತಲವಾರಿನಿಂದ ದಾಳಿ ಮಾಡಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನೌಶಾದ್ (30) ಎಂಬ ಯುವಕನ ಮೇಲೆ ತಲವಾರು ದಾಳಿ ಮಾಡಲಾಗಿದೆ. ನೌಶಾದ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನೌಶಾದ್ ಅವರು ಇತ್ತೀಚೆಗೆ ಕಂದಾವರದಲ್ಲಿ ಮಸೀದಿ ಆಡಳಿತ ವಿಚಾರವಾಗಿ ಹಲ್ಲೆಗೊಳಗಾಗಿದ್ದ ಅಬ್ದುಲ್ ಅಜೀಜ್ ಅವರ ಅಳಿಯರಾಗಿದ್ದಾರೆ. ಕಾರಿನಲ್ಲಿ ಬಂದ ಗುಂಪು ನೌಶಾದ್ ಮೇಲೆ ತಲವಾರಿನಿಂದ ದಾಳಿ ನಡೆಸಿದ್ದು, ನೌಶಾದ್ ಎದೆಭಾಗಕ್ಕೆ ಗಾಯವಾಗಿದೆ. ನವೆಂಬರ್ 15ರಂದು ರಾತ್ರಿ ಮಸೀದಿಯಲ್ಲಿ ನಮಾಜ್ ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಅಬ್ದುಲ್ ಅಜೀಜ್ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಇಬ್ಬರು ಯುವಕರು ಇದ್ದಕ್ಕಿದ್ದಂತೆ ತಲವಾರಿನಿಂದ ಹಲ್ಲೆ ನಡೆಸಿದ್ದರು. ಅಬ್ದುಲ್ ಅವರ ತಲೆ, ಕೈ ಮತ್ತು ಕಾಲಿಗೆ ಗಾಯಗಳಾಗಿದ್ದು, ಆರೋಪಿಗಳು ಪರಾರಿಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು