Tuesday, January 21, 2025
ಉಡುಪಿ

ಉಡುಪಿ: ವಿಕಲಚೇತನ ಯುವತಿಗೆ ಬಾಳ ಸಂಗಾತಿಯಾದ ಯುವಕ – ಕಹಳೆ ನ್ಯೂಸ್

ಉಡುಪಿಯ ಯುವತಿಯೋರ್ವಳ ಕಾಲುಗಳೆರಡು ಬಲಹೀನವಾದರೂ ಅದೃಷ್ಟಬಲ ಮಾತ್ರ ಚೆನ್ನಾಗಿದೆ. ದುಬೈನಲ್ಲಿ ಉದ್ಯೋಗ ಮಾಡುತ್ತಿರುವ ಸಂದೀಪ್ ಎಂಬ ಯುವಕ ತಾನೇ ಮುಂದೆ ಬಂದು ಈ ಯುವತಿಯ ಬಾಳಿಗೆ ಬೆಳಕಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿಯ ಸುನೀತಾ ಪೊಲೀಯೋ ಪೀಡಿತೆ. ತನ್ನ ಎರಡೂ ಕಾಲುಗಳ ಬಲ ಕಳೆದುಕೊಂಡಿದ್ದಳು. ಪಿಯುಸಿವರಗೆ ಓದಿಕೊಂಡು ತಂದೆ-ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಸುನೀತಾ, ತನ್ನ ಕಾಲಿನಂತೆ ಬದುಕು ಕೂಡಾ ದೌರ್ಭಾಗ್ಯಕ್ಕೆ ಈಡಾದರೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದಳು. ಆದರೆ ಕಾಲು ಕಿತ್ತುಕೊಂಡು ಕಷ್ಟ ಕೊಟ್ಟ ದೇವರು ಮದುವೆಯ ವಿಚಾರದಲ್ಲಿ ಮಾತ್ರ ಈಕೆಯ ಕೈ ಬಿಡಲಿಲ್ಲ.
ಈ ಯುವತಿಯನ್ನು ಮದುವೆಯಾಗುವ ಮೂಲಕ ಭಾಗ್ಯದ ಬಾಗಿಲು ತೆರೆದವರು ಸಂದೀಪ್ ಎಂಬ ಯುವಕ. ದುಬೈ ನಲ್ಲಿ ಉದ್ಯೋಗ ಮಾಡುತ್ತಿರುವ ಸಂದೀಪ್, ತಾನೇ ಮುಂದೆ ಬಂದು ಈಕೆಯ ಬಾಳ ಸಂಗಾತಿಯಾಗಿ, ಆಕೆಯ ಜೀವನ ಪಯಣಕ್ಕೆ ಆಧಾರವಾಗಲು ನಿರ್ಧರಿಸಿದ್ದಾರೆ. ಮನೆಯವರ ಒಪ್ಪಿಗೆಯಂತೆ ಈ ಅಪರೂಪದ ಮದುವೆಗೆ ಉಡುಪಿಯ ಕಂಬಳ್ಳಿ ದೇವಸ್ಥಾನ ಸಾಕ್ಷಿಯಾಯಿತು.
ಮದುಮಗಳು ನಡೆಯಲು ಆಗದೆ ವಾಕಿಂಗ್ ಸ್ಟಿಕ್ ತರಹದ್ದನ್ನು ಹಿಡಿದೇ ಹಸೆಮಣೆಗೆ ನಡೆದು ಬಂದಳು. ವರ ಸಂದೀಪ್ ಅತ್ಯಂತ ಲವಲವಿಕೆಯಿಂದಲೇ ಈಕೆಯ ಕುತ್ತಿಗೆಗೆ ತಾಳಿ ಕಟ್ಟುವ ಮೂಲಕ ಪೊಲಿಯೋ ಪೀಡಿತೆಗೆ ಬಾಳು ಕೊಟ್ಟ. ಈ ಅಪರೂಪದ ಮದುವೆಗೆ ಸೇರಿದ ಜನರು ವಧು-ವರರು ನೂರ್ಕಾಲ ಬಾಳಲಿ ಎಂದು ಆಶೀರ್ವದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು