Recent Posts

Sunday, November 17, 2024
ಹೆಚ್ಚಿನ ಸುದ್ದಿ

‘ಲವ್ ಜಿಹಾದ್’ ವಿರುದ್ಧ ಕಾನೂನು ತರಲು ಹೊರಟ ಬಿಜೆಪಿಗೆ ಬಿಗ್ ಶಾಕ್ -ಹೈಕೋರ್ಟ್ ಮಹತ್ವದ ತೀರ್ಪು -ಕಹಳೆ ನ್ಯೂಸ್

ಅಲಹಾಬಾದ್​: ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ಮಾಡಲು ಕೆಲವು ಶಕ್ತಿಗಳು ಸಂಘಟಿತವಾಗಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ಜಾರಿ ಮಾಡಲು ಉತ್ತರ ಪ್ರದೇಶ ಸೇರಿದಂತೆ ಬಿಜೆಪಿ ಆಡಳಿತ ಇರುವ ಕೆಲವು ಸರ್ಕಾರ ಮುಂದಾಗಿದ್ದವು. ಉತ್ತರ ಪ್ರದೇಶ ಸರ್ಕಾರ ಇಂಥದ್ದೊಂದು ಕಾನೂನು ಜಾರಿಗೆ ಚಿಂತನೆ ನಡೆಸುತ್ತಿರುವ ಬೆನ್ನಲ್ಲೇ ಇದಕ್ಕೆ ಪೂರಕ ಎಂಬಂತೆ ಕಳೆದ ತಿಂಗಳು ಅಲಹಾಬಾದ್ ಹೈಕೋರ್ಟ್​ನ ಏಕಸದಸ್ಯಪೀಠವು ಕೇವಲ ಮದುವೆಯ ಉದ್ದೇಶದಿಂದ ಮತಾಂತರವಾಗುವುದು ಸರಿಯಲ್ಲ ಎಂಬ ಮಹತ್ವದ ತೀರ್ಪನ್ನು ಕೂಡ ನೀಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಇದೀಗ ತೀರ್ಪು ಉಲ್ಟಾ ಆಗಿದೆ. ಹೈಕೋರ್ಟ್​ನ ಏಕಸದಸ್ಯಪೀಠ ನೀಡಿದ್ದ ಈ ತೀರ್ಪನ್ನು ವಿಭಾಗೀಯ ಪೀಠವು ರದ್ದು ಮಾಡಿದೆ. ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡುವಲ್ಲಿ ವಯಸ್ಕರು ಸ್ವತಂತ್ರರಾಗಿದ್ದಾರೆ. ಆದ್ದರಿಂದ ಕೇವಲ ಮದುವೆಯ ಉದ್ದೇಶದಿಂದ ಮತಾಂತರವಾಗುವುದು ಮಾನ್ಯವಲ್ಲವೆನ್ನುವುದು ಸರಿಯಲ್ಲ. ಇದು ಅಷ್ಟೊಂದು ಉತ್ತಮ ಕಾನೂನು ಅಲ್ಲ ಎಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನೆಲೆಯಲ್ಲಿ ಲವ್​ ಜಿಹಾದ್​ ವಿರುದ್ಧ ಕಾನೂನು ಜಾರಿಗೆ ಮುಂದಾಗಿರುವ ಉತ್ತರ ಪ್ರದೇಶ ಸರ್ಕಾರಕ್ಕೆ ಹಿನ್ನೆಡೆಯಾದಂತಾಗಿದೆ. ಜತೆಗೆ, ಕರ್ನಾಟಕ, ಮಧ್ಯಪ್ರದೇಶ, ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳು ಕೂಡ ಲವ್​ ಜಿಹಾದ್​ಗೆ ಸಂಬಂಧಿಸಿದಂತೆ ಕೆಲವೊಂದು ಕಾನೂನು ಜಾರಿಗೆ ತರಲು ಹೊರಟಿತ್ತು. ಇದೀಗ ಹೈಕೋರ್ಟ್​ನ ವಿಭಾಗೀಯ ಪೀಠ ನೀಡಿರುವ ತೀರ್ಪಿನಿಂದ ಸರ್ಕಾರಗಳು ಮತ್ತೊಮ್ಮೆ ಯೋಚಿಸುವಂತಾಗಿದೆ.
‘ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಸಲಿಂಗಿಗಳು ಒಟ್ಟಿಗೇ ಇರಲು ಅನುಮತಿ ಇರುವಂಥ ಈ ಸಂದರ್ಭದಲ್ಲಿ ಇಬ್ಬರು ಪ್ರಾಪ್ತ ವಯಸ್ಕರು ತಮ್ಮ ಇಷ್ಟದ ಧರ್ಮೀಯರನ್ನು ಮದುವೆಯಾಗಿ ಮತಾಂತರವಾದರೆ ಅದನ್ನು ತಪ್ಪು ಎಂದು ಹೇಳುವುದು ಅಷ್ಟು ಸಮಂಜಸವಲ್ಲ’ ಎಂದು ನ್ಯಾಯಮೂರ್ತಿಗಳಾದ ವಿವೇಕ್ ಅಗರವಾಲ್ ಮತ್ತು ಪಂಕಜ್ ನಖ್ವಿ ಅವರ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಸೆಪ್ಟೆಂಬರ್ 29ರಂದು ನ್ಯಾಯಮೂರ್ತಿ ಮಹೇಶ್ ತ್ರಿಪಾಠಿ ಅವರ ನ್ಯಾಯಪೀಠ ಮದುವೆಯ ಉದ್ದೇಶದ ಮತಾಂತರ ಸರಿಯಲ್ಲವೆಂದು ಅಭಿಪ್ರಾಯಪಟ್ಟಿತ್ತು. ಇದಾದ ನಂತರ ಲವ್ ಜಿಹಾದ್ ವಿರುದ್ಧ ಕಾನೂನು ತರುವ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಬಿಜೆಪಿ ಆಡಳಿತದ ಅನೇಕ ರಾಜ್ಯಗಳ ನಾಯಕರು ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ನೇತೃತ್ವದ ಸರ್ಕಾರಗಳೂ ಲವ್​ ಜಿಹಾದ್​ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಇದರ ವಿರುದ್ಧ ಕಾನೂನು ಜಾರಿಗೆ ಚಿಂತನೆ ನಡೆಸಿದ್ದವು.