Friday, September 20, 2024
ಸುದ್ದಿ

ಮತ್ತೆ ಹೋರಾಟಕ್ಕಿಳಿದ ಅಣ್ಣಾ ; ಉಪವಾಸ ಸತ್ಯಾಗ್ರಹ ಆರಂಭ – ಕಹಳೆ ನ್ಯೂಸ್

ಹೊಸದಿಲ್ಲಿ : ಭ್ರಷ್ಟಾಚಾರ ವಿರೋಧಿ ಆಂದೋಲನ ನಡೆಸಿದ 7 ವರ್ಷಗಳ ಬಳಿಕ ಇದೀಗ ಮತ್ತೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಲೋಕಪಾಲ ಜಾರಿಗೆ ಆಗ್ರಹಿಸಿ ಶುಕ್ರವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

2011 ರಲ್ಲಿ ಭಾರೀ ಹೋರಾಟ ನಡೆಸಿದ್ದ ರಾಮ್‌ಲೀಲಾ ಮೈದಾನದಲ್ಲೇ ಅಣ್ಣಾ ಹಜಾರೆ ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು  ಸಾವಿರಾರು ಜನರು ಹೋರಾಟದಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಭಗತ್‌ ಸಿಂಗ್‌, ರಾಜ್‌ಗುರು ಮತ್ತು ಸುಖ್‌ದೇವ್‌ ಅವರ ಹುತಾತ್ಮ ದಿನವಾದ ಕಾರಣ ಮಾರ್ಚ್‌ 23 ರಿಂದ ಅಣ್ಣಾ ಹೋರಾಟ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

ಲೋಕ್‌ ಪಾಲ್‌ ಮಸೂದೆ ಜಾರಿಯೊಂದಿಗೆ ಎಲ್ಲಾ ರಾಜ್ಯಗಳಲ್ಲಿ ಲೋಕಾಯುಕ್ತ ನೇಮಕ, ಸ್ವಾಮಿನಾಥನ್‌ ವರದಿ ಜಾರಿಗೆ ಒತ್ತಾಯಿಸಿದ್ದಾರೆ.

ರೈಲುಗಳ ರದ್ದು, ಆಕ್ರೋಶ

ಹೋರಾಟದಲ್ಲಿ ಪಾಲ್ಗೊಳ್ಳುಲು ಆಗಮಿಸುತ್ತಿದ್ದ ರೈಲುಗಳನ್ನು ಸರ್ಕಾರ ರದ್ದು ಮಾಡಿ ಹೋರಾಟ ಹತ್ತಿಕ್ಕಲು ಯತ್ನಿಸಿದೆ ಎಂದು ಅಣ್ಣಾ ಹಜಾರೆ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಲೋಕಪಾಲ ಮಸೂದೆಯನ್ನು ಕೂಡಲೆ ಜಾರಿಗೆ ತಂದು ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.