Tuesday, January 21, 2025
ಹೆಚ್ಚಿನ ಸುದ್ದಿ

ಸಿಎಂಗಳ ಜತೆ ಪ್ರಧಾನಿ ಮೋದಿ ಸಭೆ ಮುಕ್ತಾಯ: ಕರೊನಾ ಲಸಿಕೆ ಬಗ್ಗೆ ಗುಡ್​ ನ್ಯೂಸ್​! – ಕಹಳೆ ನ್ಯೂಸ್

ಬೆಂಗಳೂರು: ಕೋವಿಡ್​-19 ಹೆಚ್ಚಾಗಿರುವ ಎಂಟು ರಾಜ್ಯದ ಮುಖ್ಯಮಂತ್ರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚುವಲ್​ ಸಭೆ ಮುಕ್ತಾಯವಾಗಿದ್ದು, ಲಸಿಕೆ ಹಂಚಿಕೆ ಹಾಗೂ ಚಳಿಗಾಲದಲ್ಲಿ ಕರೊನಾ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜಾಗೃತರಾಗಿರಲು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆಯಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಎಂಟು ರಾಜ್ಯಗಳಿಂದ ಪ್ರಧಾನಿ ಮೋದಿ ಪ್ರತ್ಯೇಕವಾಗಿ ಮಾಹಿತಿ ಪಡೆದುಕೊಂಡರು. ಪ್ರಮುಖವಾಗಿ ಚಳಿಗಾಲದಲ್ಲಿ ಕರೊನಾ ಹೆಚ್ಚಾಗುವ ಸಾಧ್ಯತೆ ಹಿನ್ನಲೆ ಜಾಗೃತರಾಗಿರಲು ಸೂಚಿಸಿದರು. ಇದೇ ವೇಳೆ ಕೇಂದ್ರದಿಂದ ಲಸಿಕೆ ಬಗ್ಗೆ ಮಾಹಿತಿ ನೀಡಲಾಯಿತು. ಲಸಿಕೆ ಶೀಘ್ರದಲ್ಲೇ ಬರುವ ಸಾಧ್ಯತೆ ಇದೆ. ಬ್ಲಾಕ್ ಮಟ್ಟದಲ್ಲಿ ಹಂಚಿಕೆ ಬಗ್ಗೆ ಕ್ರಮವಹಿಸಿ ಎಂದು ತಿಳಿಸಿದರು. ಸಭೆಯಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ‌ರಾಜೀವ್ ಕುಮಾರ್ ಮಾತನಾಡಿ, ಕೋವಿಡ್ ಲಸಿಕೆ ಶೀಘ್ರದಲ್ಲೇ ಬರಲಿದೆ. ಲಸಿಕೆ ವಿತರಣೆ ಆದ್ಯತೆ ಮೇಲೆ ನಡೆಯಲಿದೆ ಎಂದರು. ಆದ್ಯತೆ ಬಗ್ಗೆ ವಿವರಣೆ ನೀಡಿದ ಅವರು ವೈದ್ಯರು, ಕೋವಿಡ್​ ವಾರಿಯರ್ಸ್ ಹಾಗೂ ವೃದ್ಧರು ಮೊದಲ ಆದ್ಯತೆ ಎಂದು ತಿಳಿಸಿದರು. ಲಸಿಕೆ ಬಂದಾಗ ತರಾತುರಿ ಮಾಡದೇ ಲಸಿಕೆ ಪೂರೈಕೆ ಮಾಡಿ. ವಿತರಣೆಗೆಂದೇ ಅಚ್ಚುಕಟ್ಟು ವ್ಯವಸ್ಥೆ ಮಾಡಿ. ಗುರುತುಪಡಿಸಿದ ಬ್ಲಾಕ್​ಗಳಿಂದ ವಿತರಣೆ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸೂಚನೆ ನೀಡಿದರು.ಕೇಂದ್ರ ಗೃಹ ಸಚಿವ ಅಮಿತ್ ಷಾ, ಸಭೆಯಲ್ಲಿ ಕೇಂದ್ರ ಕೈಗೊಳ್ಳಲಿರುವ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಸರ್ಕಾರಗಳು ಕೈಗೊಳ್ಳಬೇಕಾಗಿರುವ ಕ್ರಮಗಳು ಹಾಗು ಲಸಿಕೆ ಹಂಚಿಕೆಯ ಸಿದ್ದತೆ ಬಗ್ಗೆ ಸೂಚನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು