Monday, January 20, 2025
ಹೆಚ್ಚಿನ ಸುದ್ದಿ

ಶೈಕ್ಷಣಿಕ `ಶೂನ್ಯ ಕಲಿಕಾ ವರ್ಷ’ ಕುರಿತಂತೆ ಸಚಿವ ಸುರೇಶ್ ಕುಮಾರ್ ಮಹತ್ವದ ಮಾಹಿತಿ – ಕಹಳೆ ನ್ಯೂಸ್

ಬೆಂಗಳೂರು : ಶೈಕ್ಷಣಿಕ ಶೂನ್ಯ ಕಲಿಕಾ ವರ್ಷ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಶೂನ್ಯ ಕಲಿಕಾ ವರ್ಷ ಎಂಬ ಕಲ್ಪನೆ ಶಿಕ್ಷಣ ಇಲಾಖೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಸಚಿವರು, ಶೈಕ್ಷಣಿಕ ಕಲಿಕಾ ವರ್ಷ ಅಥವಾ ಜೀರೋ ಅಕಾಡೆಮಿಕ್ ಇಯರ್ ಎಂಬ ಪದ ಇತ್ತೀಚೆಗೆ ಹುಟ್ಟಿದೆ. ಈ ಕುರಿತು ಅನಗತ್ಯ ಗೊಂದಲ ಉಂಟಾಗುತ್ತಿದೆ. ಈ ರೀತಿಯ ಶೂನ್ಯ ಕಲಿಕಾ ವರ್ಷ ಎಂಬ ಕಲ್ಪನೆ ಶಿಕ್ಷಣ ಇಲಾಖೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ಒಂದನೇ ತರಗತಿಯಿಂದ ಏಳನೇ ತರಗತಿ ವರೆಗೂ ನಾವು ವಿವಿಧ ರೀತಿಯಲ್ಲಿ ಮಕ್ಕಳಿಗೆ ಪಾಠ ಕಲಿಸಿದ್ದೇವೆ. ಕೆಲವು ಶಾಲೆಗಳು ಆನ್ಲೈನ್ ಮೂಲಕ ಶಿಕ್ಷಣ ನೀಡಿವೆ. ಇನ್ನುಳಿದ ಶಾಲೆಗಳಲ್ಲಿ ದೂರದರ್ಶನದ ಚಂದನ ಕಾರ್ಯಕ್ರಮದ ಮೂಲಕ ಹಾಗೂ ಆಯಾ ಶಾಲೆಗಳ ಶಿಕ್ಷಕರು ಸುಮಾರು ಮೂರೂವರೆ ತಿಂಗಳ ಕಾಲ ನಡೆಸಿದ #ವಿದ್ಯಾಗಮ ಕಾರ್ಯಕ್ರಮದ ಮೂಲಕ ಈ ತರಗತಿಯ ಮಕ್ಕಳಿಗೆ ಪಾಠವನ್ನು ಹೇಳಿಕೊಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ 5,6 ಮತ್ತು 7 ತರಗತಿಗಳಿಗೆ ಪ್ರತಿದಿನ ಚಂದನದ ಸಂವೇದ ಕಾರ್ಯಕ್ರಮದ ಮೂಲಕ ನಿಗದಿತ ವೇಳೆಯಲ್ಲಿ ಪಾಠ ಪ್ರಾರಂಭವಾಗಿದೆ. ರಾಜ್ಯದ ಎಲ್ಲಾ ಮಕ್ಕಳಿಗೂ ಪಠ್ಯ ಪುಸ್ತಕಗಳನ್ನು ಜೂನ್ – ಜುಲೈ ತಿಂಗಳಲ್ಲೇ ತಲುಪಿಸಿದೆ. ಇಷ್ಟೆಲ್ಲಾ ಆದ ನಂತರವೂ ಪಾಪ, ತಮ್ಮದಲ್ಲದ ತಪ್ಪಿಗೆ ಆ ಮಕ್ಕಳು ಮತ್ತೊಂದು ವರ್ಷ ಅದೇ ತರಗತಿಯಲ್ಲಿ ಓದಬೇಕು ಎನ್ನುವುದು ಸರಿಯಲ್ಲ.

ಹಿಂದಿನ ವರ್ಷ ಸಹ ಒಂದನೇ ತರಗತಿಯಿಂದ 9ರವರೆಗೂ ಪರೀಕ್ಷೆ ಇಲ್ಲದೆ ಎಲ್ಲ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡಲಾಗಿತ್ತು.ಯಾವುದೇ ಕಾರಣಕ್ಕೂ ಯಾವುದೇ ಶಾಲೆಯಲ್ಲಿ ಯಾವುದೇ ತರಗತಿಗಳಿಗೆ ಶೂನ್ಯ ವರ್ಷ ಎಂಬುದು ಇಲ್ಲ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.