Recent Posts

Monday, January 20, 2025
ಸುದ್ದಿ

ಚಿಕ್ಕಮಗಳೂರು ಜಿಲ್ಲೆಯ ಪವಿತ್ರ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀಗುರು ದತ್ತಾತ್ರೇಯ ಪೀಠದಲ್ಲಿ ಹಿಂದು ಅರ್ಚಕರ ನಿಯುಕ್ತಿ ಹಾಗೂ ತ್ರಿಕಾಲ ಪೂಜಾವ್ಯವಸ್ಥೆಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲೆ ಹಾಗೂ ಪುತ್ತೂರು ಪ್ರಖಂಡ ವತಿಯಿಂದ ಮನವಿ – ಕಹಳೆ ನ್ಯೂಸ್

ಚಿಕ್ಕಮಗಳೂರು ಜಿಲ್ಲೆ ಜಾಗರಾ ಹೋಬಳಿ ಸ.ನಂ.195 ರಲ್ಲಿ ಇನಾಂ ದತ್ತಾತ್ರೇಯ ಪೀಠ ಕ್ಷೇತ್ರದಲ್ಲಿರುವ ಶ್ರೀಗುರು ದತ್ತಾತ್ರೇಯರ ಪಾದುಕೆಗಳುಳ್ಳ ಗುಹಾಂತರದಲ್ಲಿಯ ಇತಿಹಾಸ ಪ್ರಸಿದ್ದವಾದ,ಪೌರಾಣಿಕ ಹಿನ್ನೆಲೆಯಿಂದ ಕೂಡಿದ ಸಮಸ್ತ ಹಿಂದು ಸಮಾಜದ ಶ್ರದ್ದಾ ಭಕ್ತಿಯ ಕೇಂದ್ರವಾಗಿದ್ದು,ಈ ಪೀಠ ಶ್ರೀಗುರು ದತ್ತಾತ್ರೇಯ ಪೀಠ ಎಂದೇ ಪ್ರಸಿದ್ಧವಾಗಿದೆ.
ಇದು ಸಂಪೂರ್ಣ ಹಿಂದು ದೇವಲಯವಾಗಿದ್ದು,ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯವಸ್ಥೆಗೆ ಒಳಪಟ್ಟಿದ್ದು,ಅಧಿಕೃತ ಸರ್ಕಾರಿ ದಾಖಲೆಗಲು ಕೂಡ ಇನಾಂ ದತ್ತಾತ್ರೇಯ ಪೀಠ ಎಂದೇ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.


ಶೀಗುರುದತ್ತಾತ್ರೇಯ ಪೀಠದಲ್ಲಿ ಗುಹಾಂತರ ದೇವಾಲಯದಲ್ಲಿ ಹಿಂದೂ ದೇವರಲ್ಲಿ ನಂಬಿಕೆಯೇ ಇಲ್ಲದ ಹಿಂದು ಪೂಜಾ ಪದ್ದತಿಯನ್ನು ಒಪ್ಪದ ಮುಜಾವರ್ (ಮುಸ್ಲಿಂ ಅರ್ಚಕ) ರನ್ನು ನೇಮಿಸಿರುವುದು ಸಮಸ್ತ ಹಿಂದೂಗಳ ಭಕ್ತಿ,ಶ್ರದ್ದೆ ಹಾಗೂ ಭಾವನೆಗಳಿಗೆ ತೀವ್ರವಾದ ಆಘಾತ ಹಾಗೂ ಧಕ್ಕೆ ತರುವ ವಿಷಯವಾಗಿದೆ.ಅಲ್ಲಿಗೆ ಬರುವ ಭಕ್ತಾದಿಗಳಿಗೆ ಪಾದುಕೆ, ಪೂಜೆ,ಪುನಸ್ಕಾರ ಆರತಿ ಯಾವುದೂ ದೊರಕದೆ ಮನನೊಂದು ಅಪಮಾನಿತರಾಗಿ ಹಿಂತಿರುಗುವ ಪರಿಸ್ಥಿತಿ ಪ್ರತಿನಿತ್ಯ ಜರುಗುತ್ತಿದೆ.
ಆದುದರಿಂದ ವಿಶೇಷ ಅಸಕ್ತಿವಹಿಸಿ ಈ ವರ್ಷದ ದತ್ತಜಯಂತಿ (29.12.2020)ಒಳಗಾಗಿ ಶ್ರೀಗುರು ದತ್ತಾತ್ರೇಯ ಪೀಠದ ಗುಹಾಂತರ ದೇವಾಲಯದಲ್ಲಿರುವ ಶ್ರೀಗುರು ದತ್ತಾತ್ರೇಯರ ಪಾದುಕೆಗಳಿಗೆ ತ್ರಿಕಾಲ ಪೂಜೆ ಕಾರ್ಯಗಳು ಹಿಂದುಗಳ ಪದ್ದತಿ ಪರಂಪರೆ ಹಾಗೂ ಶ್ರದ್ದಾ ಭಕ್ತಿಗಳಿಗನುಗುಣವಾಗಿ ನಡೆಯುವಂತೆ ಹಿಂದೂ ಅರ್ಚಕರನ್ನು ನೇಮಿಸಬೇಕೆಂದು ಆಗ್ರಹಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಪುತ್ತೂರು ಸಹಾಯಕ ಕಮೀಷನರ್ ಮೂಲಕ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಡಾ. ಕೃಷ್ಣ ಪ್ರಸನ್ನ,ಬಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ,ಬಜರಂಗದಳ ಪುತ್ತೂರು ಪ್ರಖಂಡ ಸಂಚಾಲಕ್ ಹರೀಶ್ ಕುಮಾರ್ ದೊಳ್ಪಾಡಿ.ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಉಪಾಧ್ಯಕ್ಷರಾದ ಸೇಶಪ್ಪ ಬೆಳ್ಳಿಪ್ಪಾಡಿ,ಬಜರಂಗದಳ ನಗರ ಸಂಚಾಲಕ್ ಚೇತನ್ ಬೊಳುವಾರು,ನಗರ ಉಪಾಧ್ಯಕ್ಷರಾದ ಸೋಮನಾಥ ಬ್ರಹ್ಮನಗರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು