Sunday, January 19, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ಪ್ರತಿಷ್ಠಿತ ದ್ವಿಚಕ್ರ ವಾಹನದ ಶೋರೂಂಗೆ ಅಕ್ರಮ ಪ್ರವೇಶ ಮಾಡಿ ಮಾಲೀಕರ ಮೇಲೆ ಮಾಜಿ ಕೆಲಸಗಾರನಿಂದ ಹಲ್ಲೆ ; ಉಂಡ ಮನೆಗೆ ಎರಡು ಬಗೆಯಲು ಮುಂದಾದನೇ ಈತ…!? – ಕಹಳೆ ನ್ಯೂಸ್

ಪುತ್ತೂರು : ನಗರದ ಪ್ರತಿಷ್ಠಿತ ದ್ವಿಚಕ್ರ ವಾಹನ ಮಳಿಗೆಯಲ್ಲಿ ಸಂಸ್ಥೆಯ ಮಾಲಕರ ಮೇಲೆ ಮಾಜಿ ಕೆಲಸಗಾರ, ಅತಿಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದದಿಂದ‌ ನಿಂದಿಸಿ, ಹಲ್ಲೆ ನಡೆಸಿದ ಘಟನೆ (ನ. 25)ನಡೆದಿದೆ.

ಘಟನೆಯ ಹಿನ್ನಲೆ :

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ರಿ ಸಂಸ್ಥೆಯ ಕೆಲಸಗಾರನು 3 ತಿಂಗಳ ಹಿಂದೆಯೇ ಕೆಲಸ ಬಿಟ್ಟಿದ್ದು, ಈತ ಸಂಸ್ಥೆಯ ಮಾಲೀಕರ ವಿರುದ್ಧ ಹಗೆ ಸಾದಿಸಲು ಕಾಯುತ್ತಿದ್ದ ಎನ್ನಲಾಗುತ್ತಿದೆ. ಅಲ್ಲದೆ, ಆತ ಸಂಸ್ಥೆಯಿಂದ ಆತನಿಗೆ ಬರಬೇಕಾಗಿದ್ದ ಪಿಎಫ್ ಬಗ್ಗೆ ಕೇಳಿ, ಸಂಸ್ಥೆಯ ಎಚ್.ಆರ್. ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ನಡೆಸಿದ್ದನ್ನು ಗಮನಿಸಿದ ಮಾಲೀಕರು ಪ್ರಶ್ನಿಸಿದಾಗ ಈ ರೀತಿಯ ಘಟನೆ ನಡೆದಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲಸಗಾರನು ಶೋರೂಂಗೆ ಅಕ್ರಮ ಪ್ರವೇಶ ಮಾಡಿ, ಏಕಾಏಕಿ ಅನುಚಿತ ವರ್ತೆನೆ ತೋರಿ, ಅದನ್ನು ಪ್ರಶ್ನಿಸಿದ ಮಾಲೀಕರ ಮೇಲೂ ಗಾಜು ಪುಡಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗುತ್ತಿದೆ, ಹಾಗೂ ಕಹಳೆ ನ್ಯೂಸ್ ಗೆ ಪತ್ರಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಿಂದ ತೀವ್ರವಾಗಿ ಗಾಯಗೊಂಡ ಸಂಸ್ಥೆಯ ಮಾಲೀಕರು ಸರಕಾರಿ ಆಸ್ಪತ್ರೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದಾರೆ. ಹಾಗೂ ಕೆಲಸಗಾರನೂ ತನ್ನ ಮೇಲೆ ದೂರು ದಾಖಲಾಗಿದೆ ಎಂಬ ಮಾಹಿತಿ ತಿಳಿದು ಕೆಲ‌ ಗಂಟೆಗಳ ನಂತರ ಆಸ್ಪತ್ರೆಗೆ ತೆರಳಿ ದಾಖಲು ಮಾಡುವಂತೆ ಒತ್ತಡ ಹೇರುತ್ತಿದ್ದ ದೃಶ್ಯ ಸರಕಾರಿ ಆಸ್ಪತ್ರೆಯಲ್ಲಿ ಕಂಡುಬಂದಿದೆ.

ಒಟ್ಟಾರೆ, ಅನ್ನಕೊಟ್ಟ ಮನೆಗೆ ಕನ್ನ ಹಾಕಲು ಹೊರಟಿರುವುದು ಕೇದಕರ ಎಂದು ಪುತ್ತೂರಿನ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.
ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಕ್ಷ ಅಧಿಕಾರಿ ಗೋಪಾಲ್ ನಾಯ್ಕ್ ತನಿಖೆ ನಡೆಸುತ್ತಿದ್ದಾರೆ.