Recent Posts

Monday, January 20, 2025
ಹೆಚ್ಚಿನ ಸುದ್ದಿ

ಹಣದುಬ್ಬರದ ಎಫೆಕ್ಟ್; ಡಿಸೆಂಬರ್ ನಿಂದ ಹಲವು ವಸ್ತುಗಳ ಬೆಲೆ ಏರಿಕೆ – ಕಹಳೆ ನ್ಯೂಸ್

ಪದಾರ್ಥಗಳ ಹಣದುಬ್ಬರ ಏರಿಕೆ ಆಗುತ್ತಲೇ ಇದೆ ಮತ್ತು ಗ್ರಾಹಕ ಬಳಕೆ ವಸ್ತುಗಳು ಮೂರರಿಂದ ಐದು ಪರ್ಸೆಂಟ್ ಏರಿಕೆ ಕಾಣುವ ಸಾಧ್ಯತೆ ಇದೆ. ಇದರ ಜತೆಗೆ ಆಮದು ಪ್ರಮಾಣ ಕಡಿಮೆ ಮಾಡಲಾಗಿದೆ ಮತ್ತು ಉಕ್ಕು, ತಾಮ್ರ ಸೇರಿದಂತೆ ಇತರ ಲೋಹಗಳು ಐದರಿಂದ ಹನ್ನೊಂದು ಪರ್ಸೆಂಟ್ ಗಳಿಕೆ ಕಂಡಿವೆ.

ಮುಂದಿನ ತಿಂಗಳಿಂದ, ಅಂದರೆ ಡಿಸೆಂಬರ್ ನಿಂದ ಗೃಹೋಪಯೋಗಿ ವಸ್ತುಗಳಾದ ವಾಷಿಂಗ್ ಮಷೀನ್, ರೆಫ್ರಿಜರೇಟರ್, ಟೆಲಿವಿಷನ್ ಸೆಟ್ ಗಳು ಮತ್ತು ಏರ್ ಕಂಡೀಷನರ್ ಗಳ ಬೆಲೆಯಲ್ಲಿ ಮೂರರಿಂದ ಐದು ಪರ್ಸೆಂಟ್ ತುಟ್ಟಿ ಆಗುತ್ತದೆ. ಅದಕ್ಕೆ ಕಾರಣ ಏನೆಂದರೆ, ಪದಾರ್ಥಗಳ ಬೆಲೆಯಲ್ಲಿ ಏರಿಕೆ ಆಗಿದೆ. ಆದ್ದರಿಂದ ಕಂಪೆನಿಗಳು ಬೆಲೆ ಏರಿಕೆಗೆ ಮುಂದಾಗಿವೆ.
ಇದೇ ಸಂಗತಿ ಗೃಹ ನಿರ್ಮಾಣ ವಲಯಕ್ಕೂ ಅನ್ವಯಿಸುತ್ತದೆ. ಎಲ್ಲ ವಲಯಗಳಲ್ಲೂ ಸಿಮೆಂಟ್ ಒಂದು ಬ್ಯಾಗ್ ಗೆ ಐದು ರುಪಾಯಿಯಿಂದ ಹದಿನೈದು ರುಪಾಯಿ ಹೆಚ್ಚಳವಾಗಿದೆ. “ಹಣದುಬ್ಬರವು ಎರಡು ಹಂತದಲ್ಲಿ ರಿಯಲ್ ಎಸ್ಟೇಟ್ ವಲಯಕ್ಕೆ ಪೆಟ್ಟು ನೀಡಿದೆ. ಒಂದು, ಬಾಡಿಗೆ ಹೆಚ್ಚಲು ಕಾರಣವಾಗಿದೆ ಮತ್ತು ಆಸ್ತಿಗಳ ಮಾಲೀಕತ್ಚ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಲು ಕಾರಣವಾಗಿದೆ. ಆದಾಯ ಇಳಿಕೆ ಆಗುತ್ತಿದೆ ಎಂಬ ಒತ್ತಡವಿದೆ. ಇದರ ಜತೆಗೆ ನಗದು ಸಮಸ್ಯೆ ಇದೆ,” ಎನ್ನುತ್ತಾರೆ ಆರ್ ಎಂಜೆಡ್ ಮ್ಯಾನೇಜಿಂಗ್ ಡೈರೆಕ್ಟರ್.

ಜಾಹೀರಾತು
ಜಾಹೀರಾತು
ಜಾಹೀರಾತು

ಹಬ್ಬದ ಸೀಸನ್ ನಲ್ಲಿ ಪದಾರ್ಥಗಳ ಬೆಲೆ ಏರಿಕೆ ಮಧ್ಯೆಯೂ ಉತ್ಪಾದಕರು ಬೆಲೆ ಏರಿಕೆ ಮಾಡಿಲ್ಲ. ಆದರೆ ಡಿಸೆಂಬರ್ ನಿಂದ ಪದಾರ್ಥಗಳಾ ಬೆಲೆ ಸ್ಥಿರವಾಗಿ ಏರಿಕೆ ಆಗುವ ಸಾಧ್ಯತೆ ಇದೆ. ಜತೆಗೆ ಆಮದು ಕಡೆಯಿಂದ ಸವಾಲಿದ್ದು, ಪೂರೈಕೆ ಕೊರತೆ ಎದುರಾಗಿದೆ. ಇದರಿಂದ ವಸ್ತುಗಳ ಬೆಲೆ ಮೇಲೆ ಪರಿಣಾಮ ಆಗುತ್ತದೆ ಎಂದು ಅವರು ಹೇಳುತ್ತಾರೆ. ಇನ್ನು ಚೀನಾದಿಂದ ಆಮದು ಮಾಡಿಕೊಳ್ಳುವುದರ ಮೇಲೆ ನಿರ್ಬಂಧ ಹಾಕಿರುವುದು ಸಹ ಮುಖ್ಯವಾಗಿ ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಬಿಕ್ಕಟ್ಟಿನ ಮಧ್ಯೆ ವಾಷಿಂಗ್ ಮಶೀನ್, ಮೈಕ್ರೋವೇವ್, ಅಡುಗೆ ಮನೆಯ ವಸ್ತುಗಳು ಮುಂತಾದವಕ್ಕೆ ಬೇಡಿಕೆ ಹೆಚ್ಚಿದೆ. ಅದೇ ರೀತಿ ಟಿವಿಎಸ್ ಮೋಟಾರ್ಸ್, ಅಶೋಕ್ ಲೇಲ್ಯಾಂಡ್ ಸಹ ಬೆಲೆ ಏರಿಕೆಗೆ ಸಿದ್ಧವಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು