Saturday, November 23, 2024
ಸುದ್ದಿ

ಮಂಗಳೂರು ವಿಮಾನ ನಿಲ್ದಾಣಕ್ಕೆ ಮಧ್ವಶಂಕರರ ಹೆಸರಿಡಿ‌: ಪುತ್ತಿಗೆ ಮಠದ ಸ್ವಾಮೀಜಿ – ಕಹಳೆ ನ್ಯೂಸ್

ಮಂಗಳೂರು ವಿಮಾನ ನಿಲ್ದಾಣಕ್ಕೆ ಮಧ್ವ ಶಂಕರರ ಹೆಸರನ್ನಿಡುವುದು ಅತ್ಯಂತ ಅರ್ಥಪೂರ್ಣ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ ಹಾಗೂ ಶೃಂಗೇರಿಯಲ್ಲಿ ಆಧ್ಯಾತ್ಮಿಕ ಕೇಂದ್ರಗಳನ್ನು ಸ್ಥಾಪಿಸಿರುವ ಮಧ್ವಾಚಾರ್ಯ ಹಾಗೂ ಶಂಕರಾಚಾರ್ಯರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವುದು ಹೆಚ್ಚು ಮೌಲಿಕ. ಅಯೋಧ್ಯೆಯಲ್ಲಿ ಶ್ರೀರಾಮನ ಹೆಸರಿನಲ್ಲಿ ವಿಮಾನ ನಿಲ್ದಾಣ ಮೂಡಿಬರುವಂತೆ, ಆಚಾರ್ಯರ ನೆಲೆವೀಡಿನಲ್ಲಿರುವ ವಿಮಾನ ನಿಲ್ದಾಣಕ್ಕೆ ಮಧ್ವಶಂಕರರ ಹೆಸರನ್ನು ನಾಮಕರಣ ಮಾಡಿದರೆ ಭಾರತದ ದಾರ್ಶನಿಕ ಪರಂಪರೆಗೆ ಗೌರವ ಸಲ್ಲಿಸಿದಂತಾಗುತ್ತದೆ. ಜಗತ್ತಿನಲ್ಲಿ ಧರ್ಮ ಪ್ರಚಾರಕ್ಕೆ ಪೂರಕವಾಗುವುದರ ಜತೆಗೆ ಭಾವೈಕ್ಯತೆಗೆ ಇಂಬು ನೀಡಿದಂತಾಗುತ್ತದೆ’ ಎಂದು ಸ್ವಾಮೀಜಿ ಸಲಹೆ ನೀಡಿದ್ದಾರೆ. ಜಗತ್ತು ಭಾರತವನ್ನು ಗುರುತಿಸುವುದು ಆಧ್ಯಾತ್ಮದ ದೃಷ್ಟಿಯಿಂದ. ಆಧ್ಯಾತ್ಮ ದೇಶದ ಮೂಲವಾಗಿದ್ದು, ಮುಂದೆ ಜಗತ್ತಿನ ನೇತೃತ್ವ ಪಡೆಯಲು ಭಾರತಕ್ಕೆ ಉಜ್ವಲ ಹಾಗೂ ವಿಫುಲ ಅವಕಾಶಗಳಿವೆ. ರಾಮಾನುಜಾಚಾರ್ಯ, ಬಸವಣ್ಣನವರಂತಹ ಧಾರ್ಮಿಕ ನೇತಾರರ ಹೆಸರನ್ನು ಸಮೀಪದ ವಿಮಾನ ನಿಲ್ದಾಣಗಳಿಗೆ ಇಡಬೇಕು ಎಂದು ಪುತ್ತಿಗೆ ಮಠದ ಶ್ರೀಗಳು ಆಗ್ರಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು