Saturday, November 23, 2024
ಹೆಚ್ಚಿನ ಸುದ್ದಿ

‘ಒಂದು ದೇಶ, ಒಂದು ಚುನಾವಣೆ’ ಅಗತ್ಯವಿದೆ:ಪ್ರಧಾನಿ ಮೋದಿ – ಕಹಳೆ ನ್ಯೂಸ್

ಹೊಸದಿಲ್ಲಿ :’ಒಂದು ದೇಶ, ಒಂದು ಚುನಾವಣೆ’ಯ ಅಗತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೆ ಪುನರುಚ್ಚರಿಸಿದ್ದಾರೆ. “ಪ್ರತಿ ಕೆಲ ತಿಂಗಳುಗಳಿಗೊಮ್ಮೆ ನಡೆಯುವ ಚುನಾವಣೆಗಳು ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟು ಮಾಡುವುದರಿಂದ ಒಂದು ದೇಶ, ಒಂದು ಚುನಾವಣೆ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ವೀಡಿಯೋ ಕಾನ್ಫರೆನ್ಸ್ ಮೂಲಕ 80ನೇ ಅಖಿಲ ಭಾರತ ಚುನಾವಣಾ ಅಧಿಕಾರಿಗಳ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡುತ್ತಿದ್ದರು. ಚುನಾವಣೆಗಳು ಕೆಲವು ತಿಂಗಳುಗಳ ಅಂತರದಲ್ಲಿ ವಿವಿಧ ಕಡೆಗಳಲ್ಲಿ ನಡೆಯುತ್ತಿರುತ್ತವೆ. ಅಭಿವೃದ್ಧಿಯ ಮೇಲೆ ಇದರಿಂದುಂಟಾಗುವ ಪರಿಣಾಮ ಎಲ್ಲರಿಗೂ ತಿಳಿದಿದೆ. ಆದುದರಿಂದ ಒಂದು ದೇಶ, ಒಂದು ಚುನಾವಣೆ ನೀತಿ ಕುರಿತಂತೆ ಆಳವಾದ ಅಧ್ಯಯನ ಹಾಗೂ ಚರ್ಚೆಯ ಅಗತ್ಯವಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಲೋಕಸಭೆ, ವಿಧಾನಸಭೆ ಮತ್ತು ಪಂಚಾಯತ್ ಚುನಾವಣೆಗಳಿಗಾಗಿ ಒಂದೇ ಮತದಾರರ ಪಟ್ಟಿಯಿರಬೇಕೆಂಬ ಸಲಹೆಯೂ ಪ್ರಧಾನಿಯಿಂದ ಬಂತು. ಪ್ರತ್ಯೇಕ ಪಟ್ಟಿಗಳು ಸಂಪನ್ಮೂಲಗಳನ್ನು ಪೋಲು ಮಾಡಿದಂತೆ ಎಂದು ಅವರು ಹೇಳಿದರು. ಈ ವರ್ಷದ ಸ್ವಾತಂತ್ರ್ಯೋತ್ಸವ ದಿನದ ಭಾಷಣದಲ್ಲೂ ಪ್ರಧಾನಿ ಒಂದು ದೇಶ, ಒಂದು ಚುನಾವಣೆಯ ವಿಚಾರದ ಕುರಿತು ಮಾತನಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು