Recent Posts

Monday, January 20, 2025
ರಾಜಕೀಯರಾಜ್ಯ

ಕುತೂಹಲ ಮೂಡಿಸಿದೆ ಸಿಎಂ ಬಿಎಸ್​ವೈ ನಡೆ! – ಕಹಳೆ ನ್ಯೂಸ್

ಕಳೆದ ಒಂದುವಾರದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆ ಬಿಜೆಪಿ ಪಾಳಯದಲ್ಲಿ ಕುತೂಹಲ ಹುಟ್ಟಿಸಿದೆ. ನಿಗಮ ಮಂಡಳಿಗೆ ಸರಣಿ ನೇಮಕ ಮಾಡಿದ್ದ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ತುರ್ತು ಸಂಪುಟ ಸಭೆ ಕರೆದಿದ್ದಾರೆ. ಜತೆಗೆ ರಾಜ್ಯದ ಸಂಸದರ ಸಭೆಯನ್ನೂ ಕರೆದಿದ್ದಾರೆ. ಕಳೆದ ವಾರವಷ್ಟೇ ನಡೆದಿದ್ದ ಸಂಪುಟ ಸಭೆಯಲ್ಲಿ ನಾಲ್ಕಾರು ಪ್ರಮುಖ ವಿಷಯ ಹೊರತು ಹೆಚ್ಚಿನ ವಿಷಯಗಳು ಚರ್ಚೆಗೆ ಬಂದಿರಲಿಲ್ಲ. ಕೇವಲ 18 ನಿಮಿಷಯದಲ್ಲೇ ಸಂಪುಟ ಸಭೆ ಮುಗಿದಿತ್ತು.

ಇದೀಗ ಪುನಃ ಸಂಪುಟ ಸಭೆ ಕರೆದಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಬಿಎಸ್‌ವೈ ಯಾವುದಾದರೂ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದೇ? ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಚರ್ಚೆ ನಡೆಸಬಹುದೇ? ಯಾವುದಾದರೂ ಸುಗ್ರೀವಾಜ್ಞೆ ತರಲು ಈ ಸಭೆ ಕರೆದಿರಬಹುದೇ ಎಂಬಿತ್ಯಾದಿ ಚರ್ಚೆಗಳು ನಡೆದಿವೆ. ಇನ್ನು ರಾಜ್ಯದಿಂದ ಆಯ್ಕೆಯಾದ ಸಂಸದರೊಂದಿಗೆ ಚರ್ಚೆ ನಡೆಸಲು ಅನೌಪಚಾರಿಕ ಸಭೆಯನ್ನೂ ಕರೆದಿದ್ದಾರೆ. ಶುಕ್ರವಾರ 4 ಗಂಟೆಗೆ ನಡೆಯುವ ಸಭೆಯಲ್ಲಿ ಹಾಜರಾಗುವಂತೆ ಸಿಎಂ ಕಚೇರಿಂದ ಸಂಸದರಿಗೆ ಪತ್ರ ಹೋಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಉಮೇಶ್ ಜಾಧವ್, ಸಿಎಂ ರಾಜ್ಯದ ಸಂಸದರ ಸಭೆ ಕರೆದಿದ್ದಾರೆ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲು ಸಭೆ ಕರೆದಿದ್ದಾರೆ. ಕೇಂದ್ರದಲ್ಲಿನ ರಾಜ್ಯದ ಯೋಜನೆಗಳ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದರು. ಇದೆಲ್ಲಕ್ಕೂ ಶುಕ್ರವಾರ ತೆರೆ ಬೀಳುವ ಸಾಧ್ಯತೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು