Tuesday, January 21, 2025
ಹೆಚ್ಚಿನ ಸುದ್ದಿ

`ಭಾರತದ ಸಂಸ್ಕೃತಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ’ : ಪ್ರಧಾನಿ ಮೋದಿ -ಕಹಳೆ ನ್ಯೂಸ್

ನವದೆಹಲಿ : ಅಜಂತಾ ಗುಹೆಗಳು ಸೇರಿದಂತೆ ಕೋವಿಡ್-19 ರ ನಡುವೆ ವಸ್ತು ಸಂಗ್ರಹಾಲಯಗಳು ಮತ್ತು ಇತರ ಪಾರಂಪರಿಕ ತಾಣಗಳನ್ನು ಡಿಜಿಟಲೀಕರಣಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮನ್ ಕಿ ಬಾತ್ ನ 71 ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೆನಾಡದಿಂದ ಭಾರತಕ್ಕೆ ಅನ್ನಪೂರ್ಣ ದೇವಿ ಮೂರ್ತಿ ವಾಪಸ್ ತರಲಾಗಿದೆ. ವಾರಣಾಸಿಯಿಂದ ಕಾಣೆಯಾಗಿದ್ದ ಅನ್ನಪೂರ್ಣ ದೇವಿ ಭಾರತಕ್ಕೆ ವಾಪಸ್ ತರಲಾಗಿದೆ. ಇದು ಭಾರತತೀಯರಲ್ಲಿಗೂ ಶುಭ ಸುದ್ದಿ ಎಂದು ಹೇಳಿದ್ದಾರೆ. ದೇಶದ ಸಂಸತ್ತಿನಲ್ಲಿ ಬುಧವಾರ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನ್ಯೂಜಿಲೆಂಡ್ ನ ಅತ್ಯಂತ ಕಿರಿಯ ಮತ್ತು ಹೊಸದಾಗಿ ಆಯ್ಕೆಯಾದ ಸಂಸದರಲ್ಲಿ ಒಬ್ಬರಾದ ಡಾ ಗೌರವ್ ಶರ್ಮಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಹಿಮಾಚಲ ಪ್ರದೇಶದ ಹಮೀರ್ ಪುರ ಮೂಲದ 33 ವರ್ಷದ ಶರ್ಮಾ ಅವರು ನ್ಯೂಜಿಲೆಂಡ್ ನ ಹ್ಯಾಮಿಲ್ಟನ್ ವೆಸ್ಟ್ ನ ಲೇಬರ್ ಪಾರ್ಟಿಯಿಂದ ಇತ್ತೀಚೆಗೆ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ನಿನ್ನೆ ಗುರುನಾನಕ್ ಜಯಂತಿಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು, ಸಿಖ್ ಸಮುದಾಯಗಳಿಂದ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಹರಡುವ ಮೂಲಕ ಅಗತ್ಯ ಜನರಿಗೆ ಆಹಾರ ನೀಡುವ ‘ಲಂಗರು’ ಪರಂಪರೆಯನ್ನು ಮುಂದುವರಿಸಲಾಗಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು