Tuesday, January 21, 2025
ಹೆಚ್ಚಿನ ಸುದ್ದಿ

ಹೆಲ್ಮೆಟ್​ ಹಾಕಿದ್ರೂ ಇನ್ಮುಂದೆ ಕಟ್ಟಬೇಕಾಗಬಹುದು ದಂಡ! ಏಕೆ ಗೊತ್ತಾ? -ಕಹಳೆ ನ್ಯೂಸ್

ನವದೆಹಲಿ: ದ್ವಿಚಕ್ರ ವಾಹನ ಸವಾರರ ಪ್ರಾಣರಕ್ಷಣೆಯ ಹಿನ್ನೆಲೆಯಲ್ಲಿ ಹೆಲ್ಮೆಟ್​ ಕಡ್ಡಾಯ ಮಾಡಿರುವುದು ತೀರಾ ಹಳೆಯ ಸಂಗತಿ. ಅದಾದ ಮೇಲೆ ಹಿಂಬದಿ ಸವಾರರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟುತ್ತಿರುವುದನ್ನು ಕಂಡ ಸರ್ಕಾರ, ಹಿಂಬದಿ ಸವಾರರಿಗೂ ಹೆಲ್ಮೆಟ್​ ಕಡ್ಡಾಯ ಮಾಡಿದೆ.

ಹೆಲ್ಮೆಟ್​ ಇಲ್ಲದ ದಿನಗಳಿಗೆ ಹೋಲಿಸಿದರೆ, ಹೆಲ್ಮೆಟ್​ ಕಡ್ಡಾಯ ಮಾಡಿದ ಮೇಲೆ ಅಪಘಾತದಲ್ಲಿ ಮೃತಪಡುವವರ ಸಂಖ್ಯೆ ಇಳಿಮುಖವಾಗಿದ್ದರೂ, ಈಗ ಹೆಚ್ಚಿನವರು ದಂಡವನ್ನು ತಪ್ಪಿಸಿಕೊಳ್ಳಲು ನಾಮ್​ಕೇವಾಸ್ತೆ ಹೆಲ್ಮೆಟ್​ ಹಾಕಿಕೊಳ್ಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾವುದೇ ಸುರಕ್ಷತೆ ಇಲ್ಲದ ಹೆಲ್ಮೆಟ್​ಗಳನ್ನು ಕೇವಲ ದಂಡದಿಂದ ತಪ್ಪಿಸಿಕೊಳ್ಳುವ ಸಲುವಾಗಿಯಷ್ಟೇ ಹಾಕಿಕೊಳ್ಳುತ್ತಿರುವ ಕಾರಣ, ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಮನಗಂಡಿರುವ ಸುಪ್ರೀಂಕೋರ್ಟ್​ 2018ರ ಮಾರ್ಚ್‌ನಲ್ಲಿ ಬಿಐಎಸ್‌ ಪ್ರಮಾಣಿತ ಹೆಲ್ಮೆಟ್‌ಗಳನ್ನು ಸವಾರರು ಕಡ್ಡಾಯವಾಗಿ ಧರಿಸಬೇಕೆಂದು ಶಿಫಾರಸು ಮಾಡಿತ್ತು. ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ ಸಮಿತಿ ಈ ಶಿಫಾರಸನ್ನು ಮಾಡಿದ ನಂತರ ಕೋರ್ಟ್​ ಈ ಆದೇಶ ಹೊರಡಿಸಿತ್ತು.ಈ ಆದೇಶವನ್ನು ಸರ್ಕಾರ ಜಾರಿಗೆ ತಂದಿದ್ದರೂ, ಅದಿನ್ನೂ ಸರಿಯಾಗಿ ಪಾಲನೆ ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ನಿಯಮ ಕಠಿಣಗೊಳಿಸಲು ನಿರ್ಧರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ಮುಂದೆ ಐಎಸ್‌ಐ ಗುರುತಿರುವ ಬ್ಯೂರೋ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್‌ (ಬಿಐಎಸ್‌) ಪ್ರಮಾಣಿತ ಹೆಲ್ಮೆಟ್‌ಗಳನ್ನು ಮಾತ್ರ ಧರಿಸುವಂತೆ ಹೇಳಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ರುವ ಸರ್ಕಾರ, ಇಂಥ ಹೆಲ್ಮೆಟ್​ಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟ ಮಾಡುವಂತೆ ನಿರ್ದೇಶನ ನೀಡಿದೆ. ಒಂದು ವೇಳೆ ಹೆಲ್ಮೆಟ್‌ಗಳ ಮೇಲೆ ಐಎಸ್‌ಐ ಗುರುತು ಇಲ್ಲದೇ ಇದ್ದರೆ ದಂಡ ವಿಧಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.

ಕಳೆದ ವರ್ಷ ದ್ವಿಚಕ್ರ ವಾಹನ ಅಪಘಾತದಲ್ಲಿ ಬಲಿಯಾದ 56 ಸಾವಿರ ಜನರ ಪೈಕಿ 43,600 ಜನರ ಸಾವಿಗೆ ಅವರು ಹೆಲ್ಮೆಟ್‌ ಧರಿಸದೇ ಇರುವುದೇ ಕಾರಣವಾಗಿತ್ತು.ಭಾರತದಲ್ಲಿ ದಿನನಿತ್ಯ ಮಾರಾಟವಾಗುತ್ತಿರುವ 2 ಲಕ್ಷ ಹೆಲ್ಮೆಟ್‌ಗಳ ಪೈಕಿ ಶೇ.40ರಷ್ಟು ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳು ತಯಾರಾಗುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ದ್ವಿಚಕ್ರವಾಹನ ಸವಾರರು ಪ್ಲಾಸ್ಟಿಕ್‌ ಕ್ಯಾಪ್‌ಗಳನ್ನು ಧರಿಸುತ್ತಿದ್ದಾರೆ. ಐಎಸ್‌ಐ ಪ್ರಮಾಣಿತ ಹೆಲ್ಮೆಟ್‌ಗಳ ಬಳಕೆಯಿಂದ ನೂರಾರು ಜನರು ಜನರ ಪ್ರಾಣ ಉಳಿಸಬಹುದು ಎಂದು ದ್ವಿಚಕ್ರ ವಾಹನ ಹೆಲ್ಮೆಟ್‌ ತಯಾರಿಕಾ ಸಂಘಟನೆಯ ಅಧ್ಯಕ್ಷ ರಾಜೀವ್‌ ಕಪೂರ್‌ ಹೇಳಿದ್ದಾರೆ.