Tuesday, January 21, 2025
ಹೆಚ್ಚಿನ ಸುದ್ದಿ

ಬ್ರಿಟೀಷರ ಕಾಲದಲ್ಲಿ ಕಳ್ಳತನವಾಗಿದ್ದ ದೇವಿಯ ಪ್ರತಿಮೆ ಭಾರತಕ್ಕೆ ವಾಪಸ್ – ಕಹಳೆ ನ್ಯೂಸ್

ಹೊಸದಿಲ್ಲಿ: ಪ್ರಧಾನಿ ಮೋದಿ ರವಿವಾರ ನಡೆಸಿಕೊಟ್ಟ ಮನ್‌ ಕೀ ಬಾತ್‌ ನಲ್ಲಿ ಕೆನಡಾದಲ್ಲಿರುವ ಅನ್ನಪೂರ್ಣಾ ದೇವಿಯ ವಿಗ್ರಹ ಸದ್ಯದಲ್ಲೇ ವಾರಾಣಸಿಗೆ ಮರಳುವ ಸಿಹಿ ಸುದ್ದಿ ನೀಡಿದ್ದಾರೆ. ಶತಮಾನದಷ್ಟು ಹಿಂದೆ ಕಳವಾಗಿದ್ದ ಈ ವಿಗ್ರಹ ವಾಪಸ್‌ ಬರುತ್ತಿರುವುದು ಇಡೀ ದೇಶಕ್ಕೇ ಖುಷಿಯ ವಿಚಾರ ಎಂದಿದ್ದಾರೆ ಮೋದಿ. ಅಷ್ಟೇ ಅಲ್ಲ, ಕಳೆದ ಆರು ವರ್ಷಗಳಲ್ಲಿ ಇಂತಹ ಸುಮಾರು 40 ವಿಗ್ರಹಗಳನ್ನು ವಿದೇಶಗಳಿಂದ ತರಿಸಲಾಗಿದೆ. ಅಮೆರಿಕವೊಂದೇ ಭಾರತದ 200 ಪ್ರಾಚೀನ ವಸ್ತುಗಳನ್ನು ಮರಳಿಸಿದೆ.

ಕಳವಾಗಿರುವ ವಿಗ್ರಹಗಳನ್ನು ಮರಳಿ ತರಿಸುವಲ್ಲಿ ಪ್ರಧಾನಿ ಮೋದಿ ವಿಶೇಷ ಆಸಕ್ತಿ ವಹಿಸಿದ್ದಾರೆ. 2014ರಲ್ಲಿ ಪ್ರಧಾನಿಯಾದ ಬಳಿಕ ಆಸ್ಟ್ರೇಲಿಯಾದಿಂದ ಚೋಳರ ಕಾಲದ ನಟ ರಾಜ ಮತ್ತು ಅರ್ಧನಾರೀಶ್ವರ ವಿಗ್ರಹಗಳನ್ನು ವಾಪಸ್‌ ತರಲಾಯಿತು. ಇವೆರಡೂ 10ನೇ ಶತಮಾನದವು. ಸೆಪ್ಟಂಬರ್‌ನಲ್ಲಿ ಮೋದಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ವೇಳೆ ಇವುಗಳನ್ನು ಆಗಿನ ಅಲ್ಲಿನ ಪ್ರಧಾನಿ ವಾಪಸ್‌ ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

2015ರಲ್ಲಿ ಕೆನಡಾ ಪ್ರವಾಸಕ್ಕೆ ತೆರಳಿದ್ದ ವೇಳೆ ಖುಜುರಾಹೋದಿಂದ ಕಳವಾಗಿದ್ದ ವಿಗ್ರಹಗಳನ್ನು ವಾಪಸ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದಾದ ಒಂದು ತಿಂಗಳಿನಲ್ಲಿ ಜರ್ಮನಿಯು ದುರ್ಗಾ ಮಾತೆಯ ಮಹಿಷಮರ್ದಿನಿ ಅವತಾರದ ವಿಗ್ರಹ ವನ್ನು ವಾಪಸ್‌ ಮಾಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತದಿಂದ ಕಳವಾಗಿರುವ ವಿಗ್ರಹಗಳನ್ನು ಹುಡುಕುವಲ್ಲಿ ಇಂಡಿಯಾ ಪ್ರೈಡ್‌ ಎಂಬ ಎನ್‌ಜಿಎ ಸಂಘಟನೆಯ ಶ್ರಮವೂ ಇದೆ. 2014ರಲ್ಲಿ ವಿಜಯಕುಮಾರ್‌ ಮತ್ತು ಅನುರಾಗ್‌ ಸಕ್ಸೇನಾ ಎಂಬವರು ಇದನ್ನು ಸ್ಥಾಪಿಸಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಗರ ಗುಂಪೇ ಇದೆ. ಇವರ ಶ್ರಮದಿಂದ ರಾಮ, ಲಕ್ಷ್ಮಣ ಮತ್ತು ಸೀತೆಯ ವಿಗ್ರಹಗಳು ಇಂಗ್ಲೆಂಡ್‌ನಲ್ಲಿ ಇರುವುದು ಪತ್ತೆಯಾಗಿತ್ತು.

ಭಾನುವಾರ ತಮ್ಮ ಮನ್‌ ಕೀಬಾತ್‌ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅನ್ನ ಪೂರ್ಯಾ ದೇವಿಯ ವಿಗ್ರಹವು ಕೆನಡಾದಿಂದ ವಾಪಸ್‌ ಬರುತ್ತಿರುವ ಮಾಹಿತಿ ನೀಡಿದರು. ಇದನ್ನು 100 ವರ್ಷಗಳ ಹಿಂದೆ ಕಳವು ಮಾಡಲಾಗಿತ್ತು. ಈ ವಿಗ್ರಹ ಮರಳಿಸುತ್ತಿರುವ ಕೆನಡಾ ಸರಕಾರಕ್ಕೆ ಮೋದಿ ಕೃತಜ್ಞತೆ ಸಲ್ಲಿಸಿದರು. 18ನೇ ಶತಮಾನದಲ್ಲಿ ಪೇಶ್ವೆ ಬಾಜೀರಾವ್‌ ಕಾಲದಲ್ಲಿ ನಿರ್ಮಿಸಲಾಗಿದ್ದ ದೇಗುಲದಿಂದ ಈ ವಿಗ್ರಹವನ್ನು ಕಳವು ಮಾಡಲಾಗಿತ್ತು.

ಇತ್ತೀಚೆಗಷ್ಟೇ ಇಂಗ್ಲೆಂಡ್ ನಿಂದ ರಾಮ, ಲಕ್ಷ್ಮಣ, ಸೀತೆಯ ವಿಗ್ರಹಗಳನ್ನು ವಾಪಸ್‌ ತರಿಸಲಾಗಿದೆ. ಇವು ವಿಜಯನಗರ ಕಾಲದವು. 1978ರಲ್ಲಿ ತಮಿಳುನಾಡಿನಿಂದ ಇವುಗಳನ್ನು ಕಳವು ಮಾಡಲಾಗಿತ್ತು. ಇಂಗ್ಲೆಂಡ್‌ ಸರಕಾರದ ಜತೆ ಮಾತುಕತೆ ನಡೆಸಿ ವಾಪಸ್‌ ತರಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌ ತಿಳಿಸಿದ್ದಾರೆ. ಮೋದಿ ಅವರ ಆಸಕ್ತಿಯಿಂದಾಗಿ ದೇಶದ ಸಾಂಸ್ಕೃ ತಿಕ ಸಂಪ ತ್ತನ್ನು ವಾಪಸ್‌ ತರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ವಿಗ್ರಹಗಳನ್ನು ಶನಿವಾರವಷ್ಟೇ ನಾಗಪಟ್ಟಣ ಜಿಲ್ಲೆಯ ಆನಂದಮಂಗಲಂನ ದೇಗುಲದಲ್ಲಿ ಪುನರ್‌ ಪ್ರತಿಷ್ಠಾಪನೆ ನಡೆಸಲಾಗಿದೆ.