Recent Posts

Sunday, January 19, 2025
ಹೆಚ್ಚಿನ ಸುದ್ದಿ

ದೇಶಾದ್ಯಂತ ವಾಹನಗಳಿಗೆ ಏಕರೂಪದ `ಪಿಯುಸಿ’ ಸರ್ಟಿಫಿಕೇಟ್ : ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ – ಕಹಳೆ ನ್ಯೂಸ್

ಹೊಸದಿಲ್ಲಿ: ದೇಶದ ಎಲ್ಲ ವ್ಯವಸ್ಥೆಗಳನ್ನು ತಂತ್ರಜ್ಞಾನದ ವ್ಯಾಪ್ತಿಗೆ ತರುತ್ತಿರುವ ಕೇಂದ್ರ ಸರಕಾರವು ಇನ್ನೊಂದು ಪ್ರಮುಖ ಹೆಜ್ಜೆ ಇರಿಸಿದೆ. ವಾಹನಗಳ ಹೊಗೆಯುಗುಳುವಿಕೆ ಮಟ್ಟದ ಪರೀಕ್ಷಾ ಪ್ರಮಾಣಪತ್ರ (ಪೊಲ್ಯೂಷನ್‌ ಅಂಡರ್‌ ಕಂಟ್ರೋಲ್‌-ಪಿಯುಸಿ)ವನ್ನು ದೇಶಾದ್ಯಂತ ಏಕರೂಪಗೊಳಿಸಲು ಚಿಂತನೆ ನಡೆಸಿದೆ.

ಹಾಗೆಯೇ ಅದರಲ್ಲಿ ಕ್ಯುಆರ್‌ ಕೋಡ್‌ ಅಳವಡಿಸಲಾಗುತ್ತದೆ. ಅದನ್ನು ಸ್ಕ್ಯಾನ್‌ ಮಾಡಿದರೆ ವಾಹನದ ಮಾಲಕನ ವಿವರ, ಹೊಗೆ ಯುಗುಳುವಿಕೆ ಸ್ಥಿತಿಗತಿ ಮತ್ತಿತರ ಮಾಹಿತಿಗಳು ಸಿಗುತ್ತವೆ. ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಪ್ರಕಟನೆ ಹೊರಡಿಸಿ, ಸಂಬಂಧಿತರ ಅಭಿಪ್ರಾಯ ಕೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲಾಭಗಳೇನು?
ಕ್ಯುಆರ್‌ ಕೋಡ್‌ ಇರುವ ಪಿಯುಸಿ ಪ್ರಮಾಣ ಪತ್ರದಲ್ಲಿ ವಾಹನಗಳ ಸಂಪೂರ್ಣ ಮಾಹಿತಿ ಇರುತ್ತದೆ. ಹಾಗೆಯೇ ಯಾರಾದರೂ ವಾಹನವನ್ನು ಕಳವು ಮಾಡಿ ಪಿಯುಸಿ ಪ್ರಮಾಣಪತ್ರ ಪಡೆಯಲು ಹೋದರೆ, ತತ್‌ಕ್ಷಣ ಪತ್ತೆ ಹಚ್ಚಬಹುದು. ಹೊಗೆಯುಗುಳುವಿಕೆ ಪರೀಕ್ಷೆಗೆ ಮುನ್ನವೇ ವಾಹನ ಮಾಲಕನ ಮೊಬೈಲ್‌ ಸಂಖ್ಯೆಗೆ ಸಂದೇಶ ಬರುವುದರಿಂದ ಇದು ಸಾಧ್ಯವಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಿಯುಸಿಯಲ್ಲಿನ ಮಾಹಿತಿ ಒಂದು ಕಡೆ ಶೇಖರವಾಗಿರುತ್ತದೆ. ಅದನ್ನು ರಾಷ್ಟ್ರೀಯ ನೋಂದಣಿಗೆ ಸಂಪರ್ಕಿಸಲಾಗಿರುತ್ತದೆ. ಇದೇ ಮೊದಲ ಬಾರಿಗೆ ಪ್ರಮಾಣಪತ್ರವನ್ನು ತಿರಸ್ಕರಿ ಅವಕಾಶವನ್ನೂ ನೀಡಲಾಗಿದೆ. ಒಂದು ವೇಳೆ ಸಂಬಂಧಪಟ್ಟ ವಾಹನ, ಮೋಟಾರು ವಾಹನಗಳ ನಿಯಮಗಳಿಗೆ ತಕ್ಕಂತೆ ಇಲ್ಲವಾದರೆ ಪರೀಕ್ಷಾ ಕೇಂದ್ರದಲ್ಲಿ ಹೀಗೆ ಮಾಡಲು ಅವಕಾಶವಿದೆ. ಇದಕ್ಕೆ ಸೂಕ್ತ ಕಾರಣವನ್ನು ನಮೂದಿಸಬೇಕಾಗಿರುತ್ತದೆ.

ಶಿಕ್ಷೆಯೇನು?

ಒಂದು ವೇಳೆ ವಾಹನ ಹೊಗೆಯುಗುಳುವಿಕೆ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಅಧಿಕಾರಿಗಳಿಗೆ ಅನಿಸಿದರೆ ಸಂಬಂಧಪಟ್ಟ ವ್ಯಕ್ತಿಗೆ ಯಾವುದೇ ರೂಪದಲ್ಲಿ ಸಂದೇಶ ಕಳುಹಿಸಿ, ವಾಹನವನ್ನು ಪರೀಕ್ಷೆಗೊಳಪಡಿಸಲು ಸೂಚಿಸಬಹುದು. ಇದನ್ನು ಮಾಡಲು ವ್ಯಕ್ತಿ ವಿಫ‌ಲವಾದರೆ 3 ತಿಂಗಳವರೆಗೆ ಜೈಲು ಅಥವಾ 10 ಸಾವಿರ ರೂ.ವರೆಗೆ ದಂಡ ವಿಧಿಸಬಹುದು.