ಬೀಜಿಂಗ್ : ಟಿಬೇಟ್‍ನಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಚೀನಾ ದೊಡ್ಡ ಜಲಾಶಯ ಕಟ್ಟಲು ಮುಂದಾಗಿದೆ. ಇಲ್ಲಿ ಜಲ ವಿದ್ಯುದಾಗಾರ ಕೂಡ ನಿರ್ಮಾಣವಾಗಲಿದೆ. ಈಗಾಗಲೇ ಚೀನಾ ತನ್ನ 14ನೆ ಐದು ವರ್ಷದ ಯೋಜನೆ ಅನ್ವಯ ಈ ಜಲಾಶಯ ನಿರ್ಮಿಸಲು ಅನುಮತಿ ನೀಡಲಾಗಿದೆ ಎಂದು ಪವರ್ ಕನ್‍ಸ್ಟ್ರಕ್ಷನ್ ಅಧ್ಯಕ್ಷ ಯಾವ್ ಜೇಯಾಂಗ್ ತಿಳಿಸಿದ್ದಾರೆ.
ಇದು ಐತಿಹಾಸಿಕ ಯೋಜನೆ. ನಮ್ಮ 2021-25ರ ಕಾರ್ಯಕ್ರಮದಲ್ಲಿ ಹಣ ಬಿಡುಗಡೆಯಾಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದರು. ಈ ಜಲಾಶಯದಿಂದಾಗಿ ಭಾರತದ ಗಡಿ ರಾಜ್ಯಗಳಲ್ಲಿ ಆತಂಕ ಶುರುವಾಗಿದೆ. ಮುಂಗಾರು ಸಂದರ್ಭದಲ್ಲಿ ಬ್ರಹ್ಮಪುತ್ರ ನದಿ ಅಸ್ಸಾಂ, ಓಡಿಸಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಆತಂಕವನ್ನೇ ಸೃಷ್ಟಿಸುತ್ತಿದೆ. ಇದಕ್ಕೆ ಚೀನಾದ ಕುತಂತ್ರವೂ ಆಡಗಿದೆ ಎಂದು ಆರೋಪಿಸುತ್ತಾ ಬರಲಾಗಿದೆ.