Sunday, November 10, 2024
ಹೆಚ್ಚಿನ ಸುದ್ದಿ

ಚಿನ್ನವು 4 ವರ್ಷಗಳಿಗಿಂತಲೂ ಹೆಚ್ಚು ಕುಸಿತ ಕಾಣುವ ನಿರೀಕ್ಷೆ: ನವೆಂಬರ್‌ನಲ್ಲಿ 2,500 ರೂ. ಇಳಿಕೆ – ಕಹಳೆ ನ್ಯೂಸ್

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಗಳು ಕುಸಿತದ ಕಡೆಗೆ ಮುಖಮಾಡಿವೆ. ಪ್ರಮುಖ ಫಾರ್ಮಾ ಕಂಪನಿಗಳ ಲಸಿಕೆ ಪ್ರಯೋಗಗಳ ಯಶಸ್ಸಿನ ಸುದ್ದಿಯು ಚಿನ್ನದ ಬೆಲೆಯನ್ನು ದುರ್ಬಲಗೊಳಿಸಿದ್ದು, ಕಳೆದ ಒಂದು ತಿಂಗಳಲ್ಲಿ ಭಾರೀ ಇಳಿಕೆ ಕಂಡಿರುವ ಚಿನ್ನವು 4 ವರ್ಷಗಳಿಗಿಂತಲೂ ಹೆಚ್ಚು ಕುಸಿತದತ್ತ ಸಾಗಿದೆ.

ಎಂಸಿಎಕ್ಸ್ ವಹಿವಾಟು ಸೋಮವಾರ ತಡವಾಗಿ ಪ್ರಾರಂಭವಾದ ನಂತರ, ಇದು ಸುಮಾರು ಶೇಕಡಾ 1ರಷ್ಟು ಇಳಿಕೆಗೊಂಡು ಪ್ರತಿ 10 ಗ್ರಾಂಗೆ 47763 ರೂ. ದಾಖಲಾಗಿತ್ತು. ಆದರೆ ಮಂಗಳವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಭಾರತೀಯ ಮಾರುಕಟ್ಟೆಗಳಲ್ಲಿ ಏರಿಕೆ ಕಂಡಿವೆ. ಎಂಸಿಎಕ್ಸ್‌ನಲ್ಲಿ, ಫೆಬ್ರವರಿ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇ. 0.3ರಷ್ಟು ಏರಿಕೆ ಕಂಡು, 48,070 ಕ್ಕೆ ತಲುಪಿದ್ದರೆ, ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇ. 1.2ರಷ್ಟು ಹೆಚ್ಚಾಗಿ 60,977 ಕ್ಕೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ, ಚಿನ್ನದ ಭವಿಷ್ಯವು ಶೇ. 0.4ರಷ್ಟು ಕುಸಿದಿದ್ದರೆ, ಬೆಳ್ಳಿ ಶೇ. 0.2ರಷ್ಟು ಕಡಿಮೆಯಾಗಿದೆ. ಆಗಸ್ಟ್‌ನಲ್ಲಿ ದಾಖಲೆಯ ಗರಿಷ್ಠ 56,200 ರೂಪಾಯಿ ಅನ್ನು ಮುಟ್ಟಿದ ನಂತರ ಚಿನ್ನದ ಬೆಲೆಗಳು ಇಳಿಮುಖವಾಗಿವೆ. ನವೆಂಬರ್‌ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 2,500 ರೂಪಾಯಿ ಕುಸಿಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು