Sunday, January 19, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನಲ್ಲಿ ಅಕ್ರಮ ಗಾಂಜಾ ಮಾರಾಟ ಪ್ರಕರಣ ; 15 ಇಂಚು ಉದ್ದದ ಕತ್ತಿ, ಹರಿತವಾದ ಚಾಕು ವಶಕ್ಕೆ, ಆರೋಪಿಗಳನ್ನು ಬೆನ್ನಟ್ಟಿ ಹಿಡಿದು ಹೆಡೆಮುರಿಕಟ್ಟಿದ ಪೋಲೀಸರು – ಕಹಳೆ ನ್ಯೂಸ್

ಪುತ್ತೂರು: ದ.ಕ.ಜಿಲ್ಲೆಯಲ್ಲೇ ಭಾರಿ ಪ್ರಮಾಣದ ಗಾಂಜಾ ಪ್ರಕರಣವನ್ನು ಬೇಧಿಸಿದ ಪುತ್ತೂರು ನಗರ ಪೊಲೀಸರು ಇದೀಗ ಮತ್ತೊಮ್ಮೆ ಗಾಂಜಾ ಮಾರಾಟ ಜಾಲವನ್ನು ಎಸ್.ಐ ಜಂಬೂರಾಜ್ ನೇತೃತ್ವದ ದಾಳಿಯಿಂದ ಪತ್ತೆ ಮಾಡಿ ಸುಮಾರು ೬ ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ನ.೩೦ರಂದು ಪುತ್ತೂರಿನ ಕೆಮ್ಮಿಂಜೆ ಗ್ರಾಮದ ನೈತಾಡಿ ಭಗತ್‌ಸಿಂಗ್ ರಸ್ತೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಖಚಿತ ವರ್ತಮಾನದ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ನಿರ್ದೇಶನದಂತೆ ಎ.ಎಸ್ಪಿ ಲಖನ್ ಸಿಂಗ್ ಯಾದವ್ ಮತ್ತು ನಗರ ಪೊಲೀಸ್ ಠಾಣೆಯ ನಿರೀಕ್ಷಕ ಗೋಪಾಲ್ ನಾಯ್ಕ್ ಅವರ ಮಾರ್ಗದರ್ಶನದಂತೆ ಪೊಲೀಸರು ದಾಳಿ ನಡೆಸಿದ್ದರು. ಕೆಮ್ಮಿಂಜೆ ಗ್ರಾಮದ ನೈತಾಡಿ ಭಗತ್‌ಸಿಂಗ್ ಸಾರ್ವಜನಿಕ ರಸ್ತೆಯಲ್ಲಿ ೨ ಕಾರಿನಲ್ಲಿದ್ದ ಆರೋಪಿಗಳಾದ ಮಂಜೇಶ್ವರ ಪೈಯೋಳಿಕೆ ಗ್ರಾಮದ ಮಹಮ್ಮದ್ ಅರ್ಷದ್(೨೬ವ), ಉಪ್ಪಳ ಮಂಗಲ್ಪಾಡಿ ಗ್ರಾಮದ ರಿಯಾಜ್(೨೭ವ), ಕಬಕ ಗ್ರಾಮದ ಅಬ್ದುಲ್ ಖಾದರ್ ಜಾಬೀರ್(೨೩ವ), ಮೂಲತಃ ಬನ್ನೂರು ಗ್ರಾಮದವರಾಗಿದ್ದು ಸುಳ್ಯದಲ್ಲಿ ವಾಸ್ತವ್ಯ ಇರುವ ಅಬ್ದುಲ್ ನಜೀರ್(೩೭ವ)ರವರನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ರೂ. ೧,೨೫ಸಾವಿರ ಮೌಲ್ಯದ ೬ ಕೆ.ಜಿ ೩೬೦ ಗ್ರಾಂ ತೂಕದ ಗಾಂಜಾ, ರೂ. ೧೨ ಸಾವಿರ ಮೌಲ್ಯದ ೫ ಮೊಬೈಲ್, ಕೃತ್ಯಕ್ಕೆ ಬಳಸಿದ್ದ ರೂ. ೫ಲಕ್ಷ ಮೌಲ್ಯದ ಆಲ್ಟೋ ಮತ್ತು ಇಯೋನ್ ಕಾರುಗಳನ್ನು ಹಾಗೂ ಆರೋಪಿಗಳ ಬಳಿಯಿದ್ದ ೧೫ ಇಂಚು ಉದ್ದ ಕತ್ತಿ ಮತ್ತು ೧೪ ಇಂಚು ಉದ್ದ ಹರಿತವಾದ ಚಾಕು ವನ್ನು ವಶಕ್ಕೆ ಪಡಿದ್ದಾರೆ. ಆರೋಪಿಗಳ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆ ವಿವರ: ಆರೋಪಿಗಳನ್ನು ಬೆನ್ನಟ್ಟಿ ಹಿಡಿದ ಪೊಲೀಸರು :

ಕೇರಳ ಕಡೆಯಿಂದ ಪುತ್ತೂರು ಮತ್ತು ಸುಳ್ಯಗಳಿಗೆ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಎರಡು ಕಾರುಗಳಲ್ಲಿ ಸಾಗಾಟ ಮಡುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಎಸ್.ಐ ಜಂಬುರಾಜ್ ಮಹಾಜನ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿದರು. ಆರೋಪಿಗಳು ತಮ್ಮನ್ನು ಪೊಲೀಸರು ಹಿಂಬಾಲಿಸುತ್ತಿರುವ ಕುರಿತು ಅರಿತು ಪರಾರಿಯಾಗಲು ಯತ್ನಿಸಿದ್ದಾರೆ. ಇದೇ ವೇಳೆ ಆರೋಪಿಗಳು ಎನ್.ಆರ್.ಸಿ.ಸಿ ರಸ್ತೆಯಾಗಿ ನೈತಾಡಿ ಕಡೆ ಕಾರುಗಳನ್ನು ಚಾಲಯಿಸಿದಾಗ ಪೊಲೀಸರು ಅವರನ್ನು ಬೆನ್ನಟ್ಟಿ ನೈತಾಡಿ ಭಗತ್‌ಸಿಂಗ್ ರಸ್ತೆಯ ಬಳಿ ಅಡ್ಡಗಟ್ಟಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್.ಐ ಜಂಬುರಾಜ್ ಮಹಾಜನ್ ಅವರೊಂದಿಗೆ ಎ.ಎಸ್.ಐ ಬೆಳಿಯಪ್ಪ, ಹೆಡ್‌ಕಾನ್‌ಸ್ಟೇಬಲ್‌ಗಳಾದ ಜಯರಾಮ, ಕೃಷ್ಣಪ್ಪ, ರಾಧಾಕೃಷ್ಣ ಬಸವರಾಜು, ರಾಜೇಶ್, ಕಾನ್‌ಸ್ಟೇಬಲ್‌ಗಳಾದ ಕಿರಣ್, ಶರೀಫ್, ಶ್ರೀಶೈಲ, ರೇವತಿ, ಸುಬ್ರಹ್ಮಣ್ಯ, ಹೋಮ್ ಗಾರ್ಡ್ ಕೀರ್ತನ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.