Sunday, January 19, 2025
ಸಿನಿಮಾ

ಮೊದಲನದಿನವೇ ಸಕತ್ ಸಂಡ್ ಮಾಡಿದೆ ಅಪ್ಪೆ ಟೀಚರ್ ; ಉಡುಪಿಯ ಕಲ್ಪನಾ ಥಿಯೇಟರ್ ನಲ್ಲಿ ಹೌಸ್ ಫುಲ್ ಪ್ರದರ್ಶನ, ಪ್ರೇಕ್ಷಕರು ಫುಲ್ ಖುಷ್ – ಕಹಳೆ ನ್ಯೂಸ್

ಸಿನಿ ಕಹಳೆ : ಇಂದು ಬಿಡುಗಡೆ ಗೊಂಡ ಕಿಶೋರ್ ಮುಡಬಿದ್ರೆ ನಿರ್ದೇಶನದ ಅಪ್ಪೆ ಟೀಚರ್ ಚಿತ್ರವು ಬಹುತೇಕ ಎಲ್ಲಾ ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಇದು ನಿರ್ದೇಶಕ ಕಿಶೋರ್ ಗೆ ಹರ್ಷ ತಂದಿದೆ. ಅದರಲ್ಲೂ ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಜನ ಟಿಕೆಟ್ ಸಿಗದೆ ಪರದಾಡುವಂತಾಗಿದೆ. ಒಟ್ಟಾರೆ ಪ್ರೇಕ್ಷಕ ಮಾಹಾಶಯ ಈ ಪ್ರಯತ್ನ ಜೈ ಎಂದಿದ್ದಾನೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಅಪ್ಪೆ ಟೀಚರ್ ತುಳು ಚಿತ್ರರಂಗಕ್ಕೊಂದು ಟಾನಿಕ್ – ಸುಕೇಶ್ ಪೂಜಾರಿ

ಜಾಹೀರಾತು
ಜಾಹೀರಾತು
ಜಾಹೀರಾತು

ಪತ್ರಕರ್ತ ಸುಕೇಶ್ ಪೂಜಾರಿ ಪ್ರತಿಕ್ರಿಯೆ ನೀಡಿ ಈ ಕಥೆಯ ಹಿಂದಿನ ರಹಸ್ಯ ಅಪ್ಪೆಟೀಚರ್‍ನ ಕಥೆ ಕೇಳಿದ ಕೂಡಲೆ ಎಲ್ಲಾ ಕಲಾವಿದರ ಎರಡನೆ ಮಾತಿಲ್ಲದೆ ಪಟ್ಟನೆ ಒಪ್ಪಿಕೊಂಡಿದ್ದಾರೆ ಎಂದು ವಿಷಯ ಒಂದು ಬಂದಿತ್ತು. ಸಿನಿಮಾ ನೋಡಿದ ಮೇಲೆ ಅದಕ್ಕೆ ಕಾರಣ ತಿಳಿಯಿತು. ಅಷ್ಟು ಅದ್ಭುತವಾದ ಪಾತ್ರಗಳು ಪ್ರತಿಯೊಬ್ಬ ಕಲಾವಿದನಿಗೂ ಅವನಿಗೆ ಒಪ್ಪುವಂತ ಕ್ಯಾರೆಕ್ಟರ್ ಡಿಸೈನ್ ಮಾಡಿರುವ ನಿರ್ದೇಶಕ ಕಥೆಯ ಬಗ್ಗೆ ಭಾರಿ ಶ್ರಮಿಸಿದ್ದಾರೆ ಎಂದು ತೆರೆಯ ಮೇಲೆ ಕಾಣುತ್ತದೆ. ಇಂತಹ ಚಿತ್ರಗಳನ್ನು ಒಂದರ ಹಿಂದೆ ಒಂದು ಇದೇ ಚಿತ್ರತಂಡ ಚಿತ್ರಗಳನ್ನು ಕೊಡಬೇಕು. ನಾವು ಕೊಡುವ ಹಣಕ್ಕೆ ಮೋಸವಿಲ್ಲದೆ ಮನರಂಜನೆ ಕೊಡುವ ಇಂತಹ ಚಿತ್ರಗಳು ಎಷ್ಟು ಬಂದರು ಸ್ವಾಗತಿಸಲು ನಾವು ಸದಾ ಸಿದ್ಧ. ಆಲ್ ಧ ಬೆಸ್ಟ್ ನಿರ್ದೇಶಕ ಕಿಶೋರ್ ಮೂಡಬಿದಿರೆ, ನಿರ್ಮಾಪಕ ಗಣೇಶ್ ಕಾಮತ್, ಕಾರ್ಯಕಾರಿ ನಿರ್ಮಾಪಕ ರವಿಶಂಕರ್ ಪೈ, ಡಿ.ಓ.ಪಿ. ಉದಯ ಲೀಲಾ, ಸಂಗೀತ ನಿರ್ದೇಶಕ ವೆನಿಲ್ ವೇಗಸ್, ಎಡಿಟರ್ ಪ್ರದೀಪ್ ನಾಯಕ್ ಮತ್ತು ಚಿತ್ರತಂಡಕ್ಕೆ.

ವರದಿ : ಕಹಳೆ ನ್ಯೂಸ್