Tuesday, January 21, 2025
ಹೆಚ್ಚಿನ ಸುದ್ದಿ

ಧರ್ಮಸ್ಥಳದಲ್ಲಿ ಅಕ್ರಮ ಗಾಂಜಾ ಮಾರಾಟ ಜಾಲ ಪತ್ತೆ – ಕಹಳೆ ನ್ಯೂಸ್

ಧರ್ಮಸ್ಥಳ : ಇಂದಿನ ಯುವಕ ಯುವತಿಯರನ್ನು ಡ್ರಗ್ಸ್,ಗಾಂಜಾಗಳಂತಹ ಹಲವು ಮಾರಕಗಳು ಹಾಳು ಮಾಡುತ್ತಿದ್ದು,ಇದನ್ನು ತಡೆಗಟ್ಟಲು ಅನೇಕ ಕಾನೂನುಗಳು ಬಂದರೂ, ದಿನೇ ದಿನೇ ಹೆಚ್ಚುತ್ತಲಿದೆ. ಎಲ್ಲೋ ದೂರದಲ್ಲಿ ಗಾಂಜಾ ಡ್ರಗ್ಸ್ ಅಕ್ರಮ ಸಾಗಾಟ ಮುಂತಾದುವನ್ನು ನಾವು ಕೇಳುತ್ತಾ ಬಂದಿದ್ದೇವೆ.

ಇದೀಗ ನಮ್ಮ ಬಗಲಲ್ಲಿ ಗಾಂಜಾ ವ್ಯಾಪಾರದ ಘಾಟು ವಾಸನೆ ಬರುತ್ತಿದೆ. ಧರ್ಮಸ್ಥಳ ಪೋಲಿಸ್ ಠಾಣೆಯ ಉಪ ನಿರೀಕ್ಷಕರಾದ ಚಂದ್ರಶೇಖರ ಕೆ. ಹಾಗೂ ಸಿಬ್ಬಂದಿ ಗಸ್ತು ನಡೆಸುತ್ತಿದ್ದಾಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಮಂಜುನಾಥ ಎಂಬುವವನು ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಆತನನ್ನು ವಶಕ್ಕೆ ಪಡೆದ ಪೋಲಿಸರು ಆತನ ಬ್ಯಾಗ್ ಪರಿಶೀಲಿಸಿದಾಗ 15 ಸಾವಿರ ರೂ. ಮೌಲ್ಯದ ಗಾಂಜಾ ಗಿಡದ ಕೊಂಬೆಗಳು,ಗಾಂಜಾದ ಮೊಗ್ಗುಗಳು,ಎಲೆ,ಬೀಜಗಳು ಸೇರಿದಂತೆ ಒಟ್ಟು 750 ಗ್ರಾಂ ಗಾಂಜಾ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು