‘ಜನಸೇವಾ ಸದ್ಭಾವನ ಪುರಸ್ಕಾರ’ಕ್ಕೆ ಭಾಜನರಾದ ಡಾ| ರಜನಿ ವಿ.ಪೈ ; ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರಿಂದ ಗೌರವ ಪ್ರಧಾನ – ಕಹಳೆ ನ್ಯೂಸ್
ಮುಂಬಯಿ (ಆರ್‍ಬಿಐ), ಡಿ.1 : ಯುನೈಟೆಡ್ ಹ್ಯೂಮನ್ ರೈಟ್ಸ್ ಫೆಡರೇಶನ್ ಸಂಸ್ಥೆಯು ಬೃಹನ್ಮುಂಬಯಿ ಮಲಬಾರ್‍ಹಿಲ್ ಅಲ್ಲಿನ ಮಹಾರಾಷ್ಟ್ರ ರಾಜಭವನದಲ್ಲಿ ಕಳೆದ ಶುಕ್ರವಾರ ಪೂರ್ವಾಹ್ನ ಕೊರೊನಾ ವಾರಿಯರ್ಸ್ ಗೌರವ ಪ್ರದಾನ ಕಾರ್ಯಕ್ರಮ ನೆರವೇರಿಸಿತು. ರಾಜ್ಯಪಾಲರ ಅಧಿಕೃತ ಕಾರ್ಯಾಲಯ ಜಲ್ ಭೂಷಣ್ ಸಮಲೋಚನಾ ಸಭಾಗೃಹದಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಹೆಸರಾಂತ ಕೊಂಕಣಿ ಕನ್ನಡತಿ, ಸಮಾಜ ಸೇವಕಿ ಡಾ| ರಜನಿ ವಿನಾಯಕ್ ಪೈ ಇವರಿಗೆ ಯುನೈಟೆಡ್ ಹ್ಯೂಮನ್ ರೈಟ್ಸ್ ಫೆಡರೇಶನ್ ಕೊರೊನಾ ವಾರಿಯರ್ಸ್ ಗೌರವವನ್ನಾಗಿಸಿ `ಜನಸೇವಾ ಸದ್ಭಾವನ ಪುರಸ್ಕಾರ’ ಫಲಕ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.
ಈ ವರ್ಷದ ಆದಿಯಲ್ಲಿ ಭಾರತ ರಾಷ್ಟ್ರದಾದ್ಯಂತ ಹಬ್ಬಿದ್ದ ನೋವೆಲ್ ಕರೋನಾ (ಕೋವಿಡ್-19) ಸಾಂಕ್ರಮಿಕ ರೋಗದ ವಿರುದ್ಧ ಹೋರಾಡಿ ಲಾಕ್‍ಡೌನ್ ಅವಧಿಯಲ್ಲಿ ಕೊರೊನಾ ವಾರಿಯರ್ಸ್ ಆಗಿಸಿ ನಿರಂತರವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡು ರಾಷ್ಟ್ರ ಸೇವೆಯಲ್ಲಿ ಗುರುತಿಸಿಕೊಂಡ ರಜನಿ ಪೈ ಇವರ ಅನನ್ಯ ಸೇವೆಗೆ ಹ್ಯೂಮನ್ ರೈಟ್ಸ್ ಫೆಡರೇಶನ್ ಸಂಸ್ಥೆಯ ಸಂಸ್ಥಾಪಕಿ, ಕಾರ್ಯಾಧ್ಯಕ್ಷೆ ಪ್ರಭಾ ಕಿರಣ್ ಮೆಚ್ಚುಗೆ ವ್ಯಕ್ತಪಡಿಸಿ ಭವಿಷ್ಯದ್ದಲ್ಲೂ ಆರೋಗ್ಯಕರ ಮತ್ತು ಯಶಸ್ವಿ ಜೀವನದೊಂದಿಗೆ ಸಾಧಕ ಜೀವನವನ್ನು ನಡೆಸುವರೇ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕೆಲವೊಂದು ಮಹಾನೀಯರು ಉಪಸ್ಥಿತರಿದ್ದು ಇತರ ಅನೇಕ ಸೇವಕರಿಗೂ ರಾಜ್ಯಪಾಲರು ಕೊರೊನಾ ವಾರಿಯರ್ಸ್ ಗೌರವ ಪ್ರದಾನಿಸಿ ಅಭಿನಂದಿಸಿದರು.
ಡಾ. ರಜನಿ ಪೈ ಯಾರು ..!?
ಮುಂಬಯಿ ಉಪನಗರದ ಮುಲುಂಡ್ ಪ್ರದೇಶದಲ್ಲಿ ನೆಲೆಯಾಗಿದ್ದು, ಸ್ಥಳಿಯ ಬಡ ಮತ್ತು ದಲಿತ, ಮಹಿಳೆಯರು, ಮಕ್ಕಳ ಕಲ್ಯಾಣ ಹಾಗೂ ಹಲವಾರು ಸಮಾಜಮುಖಿ ಕಾಯಕಗÀಳಲ್ಲಿ ತೊಡಗಿಸಿ ಕೊಂಡಿರುವ ರಜನಿ ಪೈ ಕೊರೊನಾ ಸಂಕಷ್ಟದ ಸಮಯದಲ್ಲಿ ಬಾರೀ ಪ್ರಮಾಣದ ಪಡಿತರ, ದೈನಂದಿನ ಅತ್ಯವಶ್ಯಕ ವಸ್ತುಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದರು. ಕ್ಯಾನ್ಸರ್ ಪೀಡಿತರ ಮತ್ತು ಇತರೇ ರೋಗಿಗಳ ಸೇವೆಯಲ್ಲಿ ಸದಾ ಶ್ರಮಿಸುತ್ತಿರುವ ರಜನಿ ಪೈ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಇಲ್ಲಿನ ಸಿದ್ಧಿ ಮೂಲದವರು. ಮಹಾನಗರದ ಹಿರಿಯ ಕನ್ನಡ ಸಂಸ್ಥೆಯಾದ ಮುಂಬಯಿ ಕನ್ನಡ ಸಂಘ (ಮಾಟುಂಗ) ಇದರ ಮಹಿಳಾ ವಿಭಾಗಧ್ಯಕ್ಷೆ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್, ಕರ್ನಾಟಕ ವಿಕಾಸ ರತ್ನ, ಸೌರಭ ರತ್ನ, ಬೆಂಗಳೂರು ರತ್ನ ಪ್ರಶಸ್ತಿ, ಕ್ರಿಯಾಶೀಲ ಕನ್ನಡತಿ, ಅಂತಾರಾಷ್ಟ್ರೀಯ ಗೋಲ್ಡನ್ ಅಚೀವ್ಮೆಂಟ್ ಪ್ರಶಸ್ತಿ, ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಹೀಗೆ ಅನೇಕ ಪುರಸ್ಕಾರ, ಗೌರವಗಳಿಂದ ಗೌರವಿಸಲ್ಪಟ್ಟಿದ್ದಾರೆ.