Tuesday, January 21, 2025
ಹೆಚ್ಚಿನ ಸುದ್ದಿ

ವಿಟ್ಲದಲ್ಲಿ ಪಿಕಪ್ ಬೈಕ್ ಡಿಕ್ಕಿ, ಸವಾರಗೆ ಗಾಯ-ಕಹಳೆ ನ್ಯೂಸ್

ವಿಟ್ಲ : ಪಿಕಪ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪದ ಉಕ್ಕುಡ ಎಂಬಲ್ಲಿ ಸಂಭವಿಸಿದೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ವಿಟ್ಲ ಕಡೆಯಿಂದ ಕಾಸರಗೋಡು  ರಸ್ತೆಯಲ್ಲಿ ಪರ್ಲ ಕಡೆ ತೆರಳುತ್ತಿದ್ದ ಬೈಕ್ ಗೆ ಎದುರಿನಿಂದ ಬಂದ ಪಿಕಪ್ ವಾಹನ ಉಕ್ಕುಡ ಚೆಕ್ ಪೋಸ್ಟ್ ಗೇಟ್ ಮುಂಭಾಗ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯಲ್ಲಿ ಬೈಕ್ ಪಿಕಪ್ ವಾಹನದ ಮುಂದಿನ ಚಕ್ರದಡಿಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಬೈಕ್ ಸವಾರ ಕಾಸರಗೋಡು ಮಗಲ್ಪಾಡಿ ನಿವಾಸಿ ಹನೀಫ್ ಎಂದು ತಿಳಿದು ಬಂದಿದೆ. ಗಾಯಗೊಂಡ ಸವಾರನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ . ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.