Tuesday, January 21, 2025
ಹೆಚ್ಚಿನ ಸುದ್ದಿ

ಕೇರಳಕ್ಕೆ ಜಾನುವಾರುಗಳ ಅಕ್ರಮ ಸಾಗಾಟ ಮಾಡುತ್ತಿದ್ದ ಅಬ್ದುಲ್ ರಜಾಕ್ ಮತ್ತು ಮಹಮ್ಮದ್ ರಫೀಕನ್ನು ಹೆಡೆಮುರಿ ಕಟ್ಟಿದ ವಿಟ್ಲ ಪೋಲಿಸರು-ಕಹಳೆ ನ್ಯೂಸ್

ವಿಟ್ಲ: ಕೇರಳಕ್ಕೆ ಅಕ್ರಮವಾಗಿ ಪಿಕಪ್ ವಾಹನಲ್ಲಿ ವಧೆ ಮಾಡಲು ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮಂಜೇಶ್ವರ ಬಾಡೂರು ಮಾಕೂರಮೂಲೆ ಮನೆ ನಿವಾಸಿ ಅಬ್ದುಲ್ ರಜಾಕ್ ಎಂ. ಮತ್ತು ಮಂಜೇಶ್ವರ ದೇರಡ್ಕ ನಿವಾಸಿ ಮಹಮ್ಮದ್ ರಫೀಕ್  ಅವರನ್ನು ಪೆರುವಾಯಿ ಗ್ರಾಮದ ಬೆರಿಪದವು ಕ್ರಾಸ್ ನಲ್ಲಿ ಬಂಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಟ್ಲ ಉಪನಿರೀಕ್ಷಕ ವಿನೋದ್ ರೆಡ್ಡಿ ನೇತೃತ್ವದ ಪೋಲೀಸರ ತಂಡ ಖಚಿತ ಮಾಹಿತಿ ಮೇರೆಗೆ ಪೆರುವಾಯಿ ಗ್ರಾಮದ ಬೆರಿಪದವು ಕ್ರಾಸ್ ಎಂಬಲ್ಲಿ ಮಹಿಂದ್ರ ಪಿಕಪ್ ವಾಹನದಲ್ಲಿ ಆರೋಪಗಳು ಯಾವುದೇ ಪರವಾಣಿಗೆ ಇಲ್ಲದೆ ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಪಿಕಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಕೇರಳ ಕಡೆಗೆ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು