Friday, September 20, 2024
ಹೆಚ್ಚಿನ ಸುದ್ದಿ

ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾತೃಶ್ರೀಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪ್ರಥಮ ಪುಣ್ಯ ತಿಥಿ ಆಚರಣೆ-ಕಹಳೆ ನ್ಯೂಸ್

ವಿಟ್ಲ: ಸಮಾಜ ಸುಸಂಸ್ಕತವಾಗಲು ಮಠ ಮಂದಿರಗಳ ಪಾತ್ರ ಮಹತ್ವದ್ದಾಗಿದೆ.

ಮಕ್ಕಳಿಗೆ ಎಳವೆಯಲ್ಲಿ ಸಂಸ್ಥಾರಯುತ ಶಿಕ್ಷಣ ಸಿಕ್ಕಾಗ ಮಾತ್ರ ಸತ್ಪಜೆಯಾಗಲು ಸಾಧ್ಯ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮಿ  ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.ಅವರು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಶ್ರೀ ವಾಸುಕೀ ಬಳಗದ ವತಿಯಿಂದ ನಡೆದ ಯೋಗ, ನೃತ್ಯ, ಭಜನೆ ತರಬೇತಿ ಶಿಬಿರದ ಸಮಾರೋಪದಲ್ಲಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ  ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಮಾತೃಶ್ರೀಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪ್ರಥಮ ಪುಣ್ಯ ತಿಥಿಯನ್ನು ಆಚರಿಸಿದರು. ಶಿಲ್ಪಿ ರಮೇಶ್ ಪೆರುವಾಯಿ, ತರಬೇತುದಾರ ದೀಕ್ಷಾ ಅವರನ್ನು ಸನ್ಮಾನಿಸಿದರು.ಹಾಗೆಯೇ ೨೫ ವಿದ್ಯಾರ್ಥಿಗಳಿಗೆ ಕಿಟ್ ನೀಡಲಾಯಿತು ಮತ್ತು ಪೋಷಕರಿಗೆ ವಿಶೇಷ ಕಾಣಿಕೆ ನೀಡಿ ಗೌರವಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯ ಕ್ರಮದಲ್ಲಿ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮಿ ಪ್ರತಿಷ್ಠಾನದ ಟ್ರಸ್ಟಿ ಉದ್ಯಮಿ ಭಾಸ್ಕರ ಶೆಟ್ಟಿ ಪುಣೆ, ಮಲ್ಲಿಕಾ ಭಾಸ್ಕರ ಶೆಟ್ಟಿ ಪುಣೆ, ನಲ್ಲೂರು ಮಹಾಬಲ ಶೆಟ್ಟಿ ದಂಪತಿ, ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಕೈಯೂರು ನಾರಾಯಣ ಭಟ್, ಹರಿಶ್ಚಂದ್ರ ಮಂಗಳೂರು ಮತ್ತಿತರರು ಉಪಸ್ಥಿತರಿದ್ದರು. ಮತ್ತು ಐ್ರಸ್ಟಿ ಮಂಜು ವಿಟ್ಲ ಸ್ವಾಗತಿಸಿದರು. ಟ್ರಸ್ಟಿ ತಾರಾನಾಥ ಕೊಟ್ಟಾರಿ ಪ್ರಸ್ತಾವನೆಗೈದರು.ಹಾಗೂ ಶ್ರೀ ಮಹಾಲಕ್ಷ್ಮಿ. ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿಟ್ಠಲ ಶೆಟ್ಟಿ  ಅವರು ವಂದಿಸಿದರು. ಪೃಥ್ವೀರಾಜ್ ಕಾರ್ಯಕ್ರಮವನ್ನ ನಿರೂಪಿಸಿದರು.

ಜಾಹೀರಾತು