Monday, January 20, 2025
ಸುದ್ದಿ

ಮಂಗಳೂರು ಬೋಟ್ ದುರಂತ : ನಾಲ್ವರ ಮೃತದೇಹ ಪತ್ತೆ – ಕಹಳೆ ನ್ಯೂಸ್

 ಮಂಗಳೂರು ಸಮುದ್ರದಲ್ಲಿ ಮಂಗಳವಾರ ಬೋಟ್ ಮುಳುಗಿ ನಾಪತ್ತೆಯಾದ ನಾಲ್ವರ ಮೃತದೇಹ ಬುಧವಾರ ಪತ್ತೆಯಾಗಿದೆ. ಆದರೆ, ಓರ್ವನ ಮೃತದೇಹ ಮತ್ತೆ ಸಮುದ್ರ ಸೇರಿದ್ದು, ಮತ್ತೆ ಹುಡುಕಾಟ ಮುಂದುವರೆದಿದೆ.

ಎಲ್ಲಾ ಆರು ಮಂದಿಯ ಮೃತದೇಹ ಪತ್ತೆಯಾದರೂ ಒಂದು ಮೃತದೇಹ ಮರಳಿ ಸಮುದ್ರ ಸೇರಿದ ಕಾರಣ ಇದೀಗ ಮತ್ತೆ ಹುಡುಕಾಟ ಆರಂಭವಾಗಿದೆ. ಬೋಟು ಮುಳುಗಿದ ಘಟನೆ ಸಂಭವಿಸಿದ ಮಂಗಳವಾರ ಆರು ಮಂದಿ ನಾಪತ್ತೆಯಾದವರಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿತ್ತು. ಉಳಿದ ನಾಲ್ವರು ಕೂಡ ಶವವಾಗಿ ಪತ್ತೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಸಬಾ ಬೆಂಗರೆ ನಿವಾಸಿ ಹಸೈನಾರ್ (28), ಚಿಂತನ್ (21), ಜಿಯಾವುಲ್ಲಾ (36) ಮತ್ತು ಅನ್ಸಾರ್ ಇವರ ಮೃತದೇಹ ಬುಧವಾರ ಪತ್ತೆಯಾಗಿದೆ. ಇವರಲ್ಲಿ ಅನ್ಸಾರ್ ಮೃತದೇಹ ಬಲೆಯಲ್ಲಿ ಪತ್ತೆಯಾಗಿದ್ದು, ಅದನ್ನು ಹೊರಗೆ ತರುವಾಗ ಮರಳಿ ಸಮುದ್ರ ಪಾಲಾಗಿದೆ ಎಂದು ಹೇಳಲಾಗುತ್ತಿದೆ. ಸೋಮವಾರ ಮೀನುಗಾರಿಕೆಗೆ ತೆರಳಿದ 25 ಮಂದಿಯಿದ್ದ ಶ್ರೀರಕ್ಷಾ ಹೆಸರಿನ ಬೋಟ್’ಮುಳುಗಿತ್ತು, ಬೋಟ್ ನಲ್ಲಿದ್ದವರ ಪೈಕಿ 19 ಮಂದಿ ಹೊರಗೆ ಜಿಗಿದು ಪಾರಾದರೆ, 6 ಮಂದಿ ನಾಪತ್ತೆಯಾಗಿದ್ದರು. ಬೋಟ್ ಮುಳುಗಿದ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಜಿಲ್ಲಾಡಳಿತ ನಿಯಮದಂತೆ ತಲಾ ರೂ.6 ಲಕ್ಷ ಪರಿಹಾರ ಪ್ರಕಟಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು