Recent Posts

Monday, January 20, 2025
ರಾಜ್ಯ

ಬಿಪಿಎಲ್ ಕಾರ್ಡ್‌ದಾರರಿಗೆ 3 ಲೀಟರ್ ಸೀಮೆಎಣ್ಣೆ ವಿತರಿಸಲು ಆದೇಶ – ಕಹಳೆ ನ್ಯೂಸ್

ಬೆಂಗಳೂರು : ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಬಳಿಕ ಎಲ್‌ಪಿಜಿ ಸಂಪರ್ಕ ಇಲ್ಲದಿದ್ದರೆ ಸೀಮೆಎಣ್ಣೆ ವಿತರಣೆ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಬೆಂಗಳೂರು ಮೂಲಕ ವಕೀಲ ಎಸ್. ಚಂದ್ರಶೇಖರಯ್ಯ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ಸರ್ಕಾರಕ್ಕೆ ಈ ಕುರಿತು ನಿರ್ದೇಶನ ನೀಡಿದ್ದಾರೆ. 2016ರ ಜುಲೈನಲ್ಲಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಅನುಗುಣವಾಗಿ ಈ ನಿರ್ದೇಶ ಕೊಡಲಾಗಿದೆ. ಒಂದು ವೇಳೆ ಬಿಪಿಎಲ್ ಕುಟುಂಬಗಳು ಎಲ್‌ಪಿಜಿ ಸಂಪರ್ಕ ಹೊಂದಿಲ್ಲದಿದ್ದರೆ ತಿಂಗಳಿಗೆ 3 ಲೀಟರ್ ಸೀಮೆಎಣ್ಣೆ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ಕೊಡಲಾಗಿದೆ. ಎಲ್‌ಪಿಜಿ ಸಂಪರ್ಕ ಸಿಗುವ ತನಕ ಸೀಮೆಎಣ್ಣೆ ನೀಡಬೇಕು ಎಂದು ತಿಳಿಸಲಾಗಿದೆ.
ಹಲವಾರು ಕುಟುಂಬಗಳಿಗೆ ಸಿಲಿಂಡರ್ ಇದ್ದರೂ ಸೀಮೆಎಣ್ಣೆಯ ಉಪಯೋಗವಿದೆ. ಸೀಮೆಎಣ್ಣೆ ವಿತರಣೆ ಮಾಡಬೇಕು ಎಂದು ಹಿಂದೆ ತೀರ್ಮಾನ ಮಾಡಲಾಗಿತ್ತು. ಆದರೆ, ಅದನ್ನು ಸರ್ಕಾರ ಜಾರಿಗೆ ತಂದಿರಲಿಲ್ಲ. ಸಿಲಿಂಡರ್ ಸಂಪರ್ಕ ಇಲ್ಲದ ಕುಟುಂಬಕ್ಕೆ ಸಹ ಸೀಮೆಎಣ್ಣೆ ನೀಡುವುದನ್ನು ಸ್ಥಗಿತ ಮಾಡಲಾಗಿತ್ತು. ಸೀಮೆಎಣ್ಣೆ ಕರ್ನಾಟಕ ಸರ್ಕಾರ ಹಿಂದೆ ಹೊರಡಿಸಿದ್ದ ಆದೇಶದಂತೆ ರಾಜ್ಯಾದ್ಯಂತ ಏಕರೂಪದ ಸೀಮೆಎಣ್ಣೆ ವಿತರಣಾ ದರವನ್ನು ಜಾರಿಗೊಳಿಸಲಾಗಿದೆ. ಅನಿಲ ರಹಿತ ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿಗಳಿಗೆ ಪ್ರತಿ ತಿಂಗಳು 3 ಲೀಟರ್ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ, ಗ್ರಾಮ ಪಂಚಾಯತಿಗಳಲ್ಲಿ ನೋಂದಣಿಗೊಂಡಿರುವ ಅನಿಲ ಸಂಪರ್ಕ ಹೊಂದಿರುವ ಯಾವುದೇ ವರ್ಗದ ಪಡಿತರ ಚೀಟಿದಾರರಿಗೆ 1 ಲೀಟರ್ ಸೀಮೆಎಣ್ಣೆಯನ್ನು ಲೀಟರ್‌ಗೆ ರೂ. 35ರಂತೆ ವಿತರಣೆ ಮಾಡಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾತ್ರೆ, ಪ್ರವಾಹ, ಮೀನುಗಾರಿಕೆ ಇತ್ಯಾದಿಗಳಿಗೆ ಸಹಾಯಧನ ರಹಿತ ದರದಲ್ಲಿ ಖರೀದಿಸಬೇಕಾದ ಸೀಮೆಎಣ್ಣೆಯನ್ನು ಮೀನುಗಾರಿಕಾ ಉದ್ದೇಶಕ್ಕಾಗಿ ಜಿಲ್ಲಾಧಿಕಾರಿಗಳು ನೀಡುವ ಪರ್ಮಿಟ್ ಆಧಾರದ ಮೇಲೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗುತ್ತದೆ. ಶಿವಮೊಗ್ಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಅನೌಪಚಾರಿಕ ಪಡಿತರ ಪ್ರದೇಶಗಳಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ನಗರ ಪ್ರದೇಶಗಳಲ್ಲಿ ಪಡಿತರ ಸೀಮೆಎಣ್ಣೆ ವಿತರಣೆಯನ್ನು ಸ್ಥಗಿತಗೊಳಿಸಿ ಸೀಮೆಎಣ್ಣೆ ಮುಕ್ತ ಪ್ರದೇಶಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಸರ್ಕಾರ ಹೇಳಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು