Recent Posts

Monday, January 20, 2025
ಬಂಟ್ವಾಳ

ಬಂಟ್ವಾಳ: ಆಟೋ ರಿಕ್ಷಾ ಪಲ್ಟಿಯಾಗಿ ಮೂರು ದಿನದ ಹಸುಗೂಸು ಸಾವು- ಕಹಳೆ ನ್ಯೂಸ್

ಚಾಲಕನ ನಿಯಂತ್ರಣ ತಪ್ಪಿ ಅಟೋ ರಿಕ್ಷಾವೊಂದು ಉರುಳಿ ಬಿದ್ದ ಪರಿಣಾಮ ಮೂರು ದಿನದ ಹಸುಗೂಸು ಮೃತಪಟ್ಟಿದ್ದು, ಚಾಲಕ ಸಹಿತ ಇಬ್ಬರು ಮಹಿಳೆಯರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ತಾಲೂಕಿನ ಬೆಂಜನಪದವು ಸಮೀಪದ ಕಲ್ಪನೆ ತಿರುವು ಬಳಿ ಬುಧವಾರ ಸಂಜೆ ನಡೆದಿದೆ.

ಗುರುಪುರ – ಕೈಕಂಬ ಮೂಲದ ಉಮೈರಾ ಎಂಬ ಮಹಿಳೆ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮೂರು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬುಧವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಬಿ.ಸಿ.ರೋಡು ಕಡೆ ಬರುವ ಖಾಲಿ ಅಂಬ್ಯುಲೆನ್ಸ್ ನಲ್ಲಿ ಬಂದು ಬಿ.ಸಿ.ರೋಡು – ಕೈಕಂಬದಲ್ಲಿ ಇಳಿದು ಅಲ್ಲಿಂದ ಗೂಡಿನಬಳಿ ನಿವಾಸಿಯೋರ್ವರ ಅಟೋ ರಿಕ್ಷಾದಲ್ಲಿ ತೆರಳಿದ್ದರು. ಅಟೋ ರಿಕ್ಷಾ ಬೆಂಜನಪದವು ಸಮೀಪದ ಕಲ್ಪನೆ ತಿರುವು ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಘಟನೆಯಿಂದ ತಾಯಿಯ ಮಡಿಲಲ್ಲಿದ್ದ ಹಸುಗೂಸು ಹೊರಗೆಸೆಯಲ್ಪಟ್ಟು ಸ್ಥಳದಲ್ಲಿಯೇ ಮೃತಪಟ್ಟಿದೆ. ಉಮೈರಾ ಅವರಿಗೆ ನಾಲ್ಕು ಗಂಡು ಮಕ್ಕಳಿದ್ದು ಐದನೇ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ಮನೆ ಸೇರುವ ಮೊದಲೇ ಅಪಘಾತದಲ್ಲಿ ಮೃತಪಟ್ಟಿದೆ.ರಿಕ್ಷಾದಲ್ಲಿದ್ದ ಇಬ್ಬರು ಮಹಿಳಾ ಪ್ರಯಾಣಿಕರಿಗೂ ಅಲ್ಪಸ್ವಲ್ಪ ಗಾಯಗಳಾಗಿದ್ದು, ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು