ಪುತ್ತೂರು: ಹೆಚ್ಚಿನ ಚಿಕಿತ್ಸೆಗಾಗಿ ಸುಹಾನ ಬೆಂಗಳೂರಿಗೆ ಶಿಫ್ಟ್; ಪುತ್ತೂರಿನುದ್ದಕ್ಕೂ ಜೀರೋ ಟ್ರಾಫಿಕ್ ಮಾಡುವ ಮೂಲಕ ಸಹಕರಿಸಿದ ಪುತ್ತೂರು ಪೊಲೀಸರು- ಕಹಳೆ ನ್ಯೂಸ್
ಪುತ್ತೂರು: ಗಂಭೀರವಾದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ಯುವತಿ ಸುಹಾನಾ ರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲು ಝೀರೋ ಟ್ರಾಫಿಕ್ ನ ಮೊರೆ ಹೋಗಲಾಗಿತ್ತು.
ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಕೆಎಂಸಿಸಿ ವಿಶೇಷ ಆಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ವೈದೇಹಿ ಆಸ್ಪತ್ರೆಗೆ ನಿನ್ನೆ ಬೆಳಿಗ್ಗೆ11 ಗಂಟೆಗೆ ಕರೆದೊಯ್ದು ಕೇವಲ 4ಗಂಟೆ 20ನಿಮಿಷ ಒಳಗಾಗಿ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ತಲುಪಿಸಲಾಯಿತು. ಇದೇ ವೇಳೆ ಪುತ್ತೂರಿನಿಂದ ಹೊರಟ ಈ ಆಂಬುಲೆನ್ಸ್ ಗೆ ಪುತ್ತೂರು ತಾಲೂಕಿನ ಮಾರ್ಗದುದ್ದಕ್ಕೂ ಯಶಸ್ವೀ ಜೀರೋ ಟ್ರಾಫಿಕ್ ಮಾಡುವಲ್ಲಿ ಪುತ್ತೂರಿನ ನಾಗರಿಕರ ಜೊತೆಗೆ ಪುತ್ತೂರು ಪೋಲೀಸರ ಕಾರ್ಯವೂ ಮೆಚ್ಚುವಂತಹದ್ದು. ಇದೇ ವೇಳೆ ಆಂಬುಲೆನ್ಸ್ ಗೆ ಎಸ್ಕಾಟ್ ಮೂಲಕ ಪುತ್ತೂರಿನ ಟ್ರಾಫಿಕ್ ಪೊಲೀಸ್ ಜೀಪ್ ವಾಹನವನ್ನು ರಾಧಾಕೃಷ್ಣ ಇವರು ಚಲಾಯಿಸಿದ್ದು ಈ ವೇಳೆ ಪಿಎಸ್ಐ ರಾಮ್ ನಾಯ್ಕ್, ಹೆಡ್ ಕಾನ್ಸ್ಟೇಬಲ್ ಶಿವಪ್ರಸಾದ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಜೀರೋ ಟ್ರಾಫಿಕ್ ಮಾಡಿ ಯಶಸ್ವಿಯಾಗಿ ಆಂಬುಲೆನ್ಸ್ ಬೆಂಗಳೂರು ಆಸ್ಪತ್ರೆ ತಲುಪಲು ಸಹಕರಿಸಿದರು.