Wednesday, April 2, 2025
ಮೂಡಬಿದಿರೆ

ಮೂಡುಬಿದಿರೆ: ಡಿ.6ರಂದು ಶ್ರೀ ಸತ್ಯಸಾರಮಾನಿ ಯುವ ಸೇನೆ ಲೋಕಾರ್ಪಣೆ – ಕಹಳೆ ನ್ಯೂಸ್

ಮೂಡುಬಿದಿರೆ: ಶ್ರೀ ಸತ್ಯಸಾರಮಾನಿ ಯುವ ಸೇನೆ, ಕೇಂದ್ರ ಸಮಿತಿ ಮೂಡುಬಿದಿರೆ ವತಿಯಿಂದ ಪರಮಪೂಜ್ಯ, ವಿಶ್ವಮಾನ್ಯ, ಭಾರತ ರತ್ನ, ಮಹಾನಾಯಕ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಹಾಗೂ ಶ್ರೀಸತ್ಯಸಾರಮಾನಿ ಯುವಸೇನೆ ಲೋಕಾರ್ಪಣೆ ಕಾರ್ಯಕ್ರಮವು ಡಿಸೆಂಬರ್ 6 ರಂದು ನಡೆಯಲಿದೆ.

ಕಾರ್ಯಕ್ರಮವು ಮೂಡುಬಿದಿರೆಯ ಸ್ವರ್ಣ ಮಂದಿರ, ಸಮಾಜ ಮಂದಿರದ ಆವರಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಆರಂಭಗೊಳ್ಳಲಿದೆ. ಕಾರ್ಯಕ್ರಮವನ್ನು ರಾಷ್ಟ್ರ ಪ್ರಶಸ್ತ್ರಿ ಪುರಸ್ಕೃತ ಖ್ಯಾತ ಚಲನ ಚಿತ್ರ ನಟ ಮೋಹನ್ ಶೇಣಿ ಸುಳ್ಯ ಉದ್ಘಾಟಿಸಲಿದ್ದಾರೆ. ಶ್ರೀ ಸತ್ಯಸಾರಮಾನಿ ಯುವಸೇನೆಯ ಅಧ್ಯಕ್ಷ ಸುರೇಶ್ ಪಿ.ಬಿ. ಅಧ್ಯಕ್ಷತೆ ವಹಿಸಲಿದ್ದಾರೆ.
“ಕುಲದೈವ ಕಾನದ-ಕಟದರು ಮತ್ತು ಅವರ ಆದರ್ಶಗಳು” ಎಂಬ ವಿಚಾರದಲ್ಲಿ ಪತ್ರಕರ್ತ ಯೋಗಿನಿ ಮಚ್ಚಿನ ಹಾಗೂ “ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಸಂದೇಶಗಳು” ಎಂಬ ವಿಷಯದಲ್ಲಿ ಆಲದಪದವು ಅಕ್ಷರ ಭಾರತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಶಿಕ್ಷಕ ಸುಕೇಶ್ ಅವರು ಪ್ರಧಾನ ಭಾಷಣವನ್ನು ಮಾಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಂಗನಟ, ಗಾಯಕ ವಿನೋದ್ ರಾಜ್ ಕೋಕಿಲ, ಯುವ ಉದ್ಯಮಿ, ಯುವ ಸಂಕಿರಣ ಅಧ್ಯಕ್ಷ ಲಕ್ಷ್ಮಣ್ ಜಿ.ಎಸ್., ನ್ಯಾಯವಾದಿ ಪ್ರಮೀಳಾ, ಶ್ರೀಸತ್ಯಸಾರಮಾನಿ ಯುವಸೇನೆಯ ಪ್ರಧಾನ ಕಾರ್ಯದರ್ಶಿ ಉದಯ ಗೋಳಿಯಂಗಡಿ, , ಶ್ರೀಸತ್ಯಸಾರಮಾನಿ ಯುವಸೇನೆಯ ಖಜಾಂಚಿ ರಾಜೇಶ್ ನೆತ್ತೊಡಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ