Sunday, January 19, 2025
ಸುದ್ದಿ

ನಮೋ ಆಪ್ ಡಿಲಿಟ್ ಮಾಡಿ ಎಂದ ರಮ್ಯಾ, ಮಂಗಳಾರತಿ ಮಾಡಿದ ಟ್ವಿಟ್ಟಿಗರು – ಕಹಳೆ ನ್ಯೂಸ್

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯ ‘ನಮೋ ಆಪ್’ ಅನ್ನು ಡಿಲಿಟ್ ಮಾಡಿ ಎನ್ನುವ #DeleteNaMoApp ಹ್ಯಾಷ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿದ, ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾಗೆ ಎಂದಿನಂತೆ ಟ್ವಿಟ್ಟಿಗರು ಮಂಗಳಾರತಿ ಮಾಡಿದ್ದಾರೆ. ನಮೋ ಆಪ್ ನೊಂದಾಯಿಸಿಕೊಂಡಿರುವವರ ಖಾಸಗಿ ಮಾಹಿತಿಗಳು ಕಳವು ಆಗುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಸುಳ್ಳುಸುದ್ದಿಯನ್ನು ಬಿತ್ತರಿಸುವ ಕಾರ್ಖಾನೆಯೆಂದರೆ ಅದು ಬಿಜೆಪಿ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಆರೋಪಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಫೇಸ್ ಬುಕ್ ಬಳಕೆದಾರರ ಮಾಹಿತಿ ಕಳುವಿನ ವಿಷಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ ಮುಂದುವರಿದಿತ್ತು ಈ ಸಂದರ್ಭದಲ್ಲಿ ಕಾಂಗ್ರೆಸ್ ವಕ್ತಾರರು ಬಿಜೆಪಿ ವಿರುದ್ದ ಹೇಳಿಕೆಯನ್ನು ನೀಡಿದ್ದರು. ಇದನ್ನು ಉಲ್ಲೇಖಿಸಿ ರಮ್ಯಾ, ನಮೋ ಆಪ್ ಡಿಲಿಟ್ ಮಾಡಿ ಎಂದು ಟ್ವೀಟ್ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂಬ್ರಿಜ್ ಅನಾಲಿಟಿಕಾದ ಅಂಗ ಸಂಸ್ಥೆಯಾದ ಒವ್ಲೆನೋ ಜೊತೆ ಕಾಂಗ್ರೆಸ್ ಸಂಪರ್ಕವನ್ನು ಹೊಂದಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸುತ್ತಾ ಸುರ್ಜೇವಾಲ, ಬಿಜೆಪಿ ಆರೋಪವನ್ನು ಅಲ್ಲಗಳೆದಿದ್ದರು. ಜೊತೆಗೆ, ನಮೋ ಆಪ್ ನಲ್ಲಿ ಮಾಹಿತಿ ಕಳವು ಆಗುತ್ತಿದೆ ಎಂದು ಹೇಳಿದ್ದರು. ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ ಮಾಡಿರುವ ಟ್ವೀಟಿಗೆ ಆಕ್ರೋಶ ವ್ಯಕ್ತವಾಗಿದ್ದು, ಟ್ವಿಟ್ಟಿಗರು ನಮೋ ಆಪ್ ಅನ್ನು ಮತ್ತೆ ಇನ್ಸ್ಟಾಲ್ ಮಾಡಿಕೊಳ್ಳುತ್ತೇವೆ, ನಿಮ್ಮನ್ನು ಟ್ವಿಟ್ಟರ್ ನಲ್ಲಿ ಅನ್ ಫಾಲೋ ಮಾಡಿಕೊಳ್ಳುತ್ಟೇವೆ.. ಹೀಗೆ ತರಹೇವಾರಿ ರಿಪ್ಲೈ ಮಾಡುತ್ತಿದ್ದಾರೆ.

Ramya Divya Spandana
Ramya Divya Spandana

ರಮ್ಯಾಗೆ ಸರಿಯಾಗಿ ಮಂಗಳಾರತಿ ಮಾಡಿದ ಟ್ವಿಟ್ಟಿಗರು :

ಇವತ್ತು ಯಾವುದಾದರೂ ಒಂದು ಕೆಲಸವನ್ನು ನೀವು ಮಾಡುತ್ತಿರಾದರೆ, ಮೊದಲು ನಮೋ ಆಪ್ ಅನ್ನು ಡಿಲಿಟ್ ಮಾಡಿ ಎಂದು ರಮ್ಯಾ ಮಾಡಿರುವ ಟ್ವೀಟ್. ಇದು ಸುಮಾರು 560 ರಿಟ್ವೀಟ್ ಮತ್ತು 400ಕ್ಕೂ ಹೆಚ್ಚು ರಿಪ್ಲೈಯನ್ನು ಪಡೆದುಕೊಂಡಿದೆ. ಬಂದಿರುವ ಬಹುತೇಕ ಎಲ್ಲಾ ರಿಪ್ಲೈಗಳಲ್ಲಿ ರಮ್ಯಾ ಅವರನ್ನು ಟ್ವಿಟ್ಟಿಗರು ಸರಿಯಾಗಿ ಮಂಗಳಾರತಿ ಮಾಡಿದ್ದಾರೆ.

ನೀವು ಅವರಲ್ಲಿ ದೇವರನ್ನು ಕಾಣುತ್ತಿದ್ದೀರಾ ? ಎನ್ನುವ ಪ್ರಶ್ನೆ

ನೀವು ಅವರಲ್ಲಿ ದೇವರನ್ನು ಕಾಣುತ್ತಿದ್ದೀರಾ, ನಮೋ ಆಪ್ ಅನ್ನು ಹಾಕಿಕೊಳ್ಳುತ್ತಿದ್ದೇನೆ, ಗಾಂಧಿ ಕುಟುಂಬದ ಚೇಲಾಗಳು ನೀವು.. ಎನ್ನುವ ಟ್ವೀಟ್ ರಿಪ್ಲೈಗಳು. ರಮ್ಯಾ ಅವರ ಈ ಟ್ವೀಟಿನಿಂದ ನಮೋ ಆಪ್ ನ ಚಂದಾದಾರರು ಹೆಚ್ಚಾದರೆ ಆಶ್ಚರ್ಯ ಪಡಬೇಕಾಗಿಲ್ಲ.

‘ರಾಗಾ’ ಆಪ್ ಡೌನ್ಲೋಡ್ ಮಾಡಿಕೊಳ್ಳಿ, ಅದರಲ್ಲಿ ತಾಜಾ ಜೋಕ್ಸ್ :

ನಮೋ ಆಪ್ ಡಿಲಿಟ್ ಮಾಡಿದ ನಂತರ ‘ರಾಗಾ’ ಆಪ್ ಡೌನ್ಲೋಡ್ ಮಾಡಿಕೊಳ್ಳಿ, ಅದರಲ್ಲಿ ತಾಜಾ ಜೋಕ್ಸ್, ಮನಸ್ಸಿಗೆ ಮುದ ನೀಡುವ ಐಟಂಗಳು ಸಿಗುತ್ತವೆ. ಇದಕ್ಕೆ ಐದು ಸ್ಟಾರ್ ರೇಟಿಂಗ್ ಕೊಟ್ಟನಂತರ ನಿಮಗೆ ಐದು ಕೆಜಿ ಆಲೂಗೆಡ್ಡೆ ಸಿಗುತ್ತದೆ. ನಮೋ ಆಪ್ ಗೆ ಪರ್ಯಾಯ ಎಂದರೆ Don’t #DeleteNaMoApp but install #PappuAppToo ಎನ್ನುವ ರಿಪ್ಲೈ.

ದಕ್ಷಿಣಭಾರತವನ್ನು ದುರ್ಬಲಗೊಳಿಸಲು ನೋಡುತ್ತಿದ್ದಾರೆ :

ನಾನು ಇದುವರೆಗೂ ನಮೋ ಆಪ್ ಹಾಕಿಕೊಂಡಿರಲಿಲ್ಲ, ಇನ್ನು ಹಾಕಿಕೊಳ್ಳುತ್ತೇನೆ, ಇತರರಿಗೆ ಹಾಕಿಸಿಕೊಳ್ಳಲೂ ಹೇಳುತ್ತೇನೆ. ಮೋದಿಯಿಂದಾಗಿ ದೇಶ ಇಬ್ಬಾಗವಾಗುವ ಸಾಧ್ಯತೆ ಇರುವುದರಿಂದ ಜೊತೆಗೆ ದೇಶದ ಎಲ್ಲಾ ರಾಜ್ಯಗಳಲ್ಲಿ ತಮ್ಮ ಅಧಿಕಾರ ಸ್ಥಾಪಿಸಿಕೊಳ್ಳಲು ಅವರು ಮುಂದಾಗಿರುವುದರಿಂದ ದಕ್ಷಿಣಭಾರತವನ್ನು ದುರ್ಬಲಗೊಳಿಸಲು ನೋಡುತ್ತಿದ್ದಾರೆ.

ನಮೋ ಆಪ್ ಡಿಲಿಟ್ ಮಾಡಿ ಎಂದು ನೀವು ಹೇಳಿದಷ್ಟು ಡೌನ್ಲೋಡ್ ಹೆಚ್ಚು :

ಈ ಆಪ್ ಇದ್ದಿದ್ದೇ ಗೊತ್ತಿರಲಿಲ್ಲ, ಈಗ ನನ್ನ ಮೊಬೈಲಿಗೆ ಹಾಕಿಕೊಳ್ಳುತ್ತೇನೆ, ನಮೋ ಆಪ್ ಡಿಲಿಟ್ ಮಾಡಿ ಎಂದು ನೀವು ಹೇಳಿದಷ್ಟು ಇನ್ನೂ ಹೆಚ್ಚಿನ ಜನ ಹಾಕಿಕೊಳ್ಳುತ್ತಾರೆ. ಪ್ರವೀಣ್ ಚಕ್ರವರ್ತಿಯ ಬಗ್ಗೆಯೂ ಸ್ವಲ್ಪ ಹೇಳಿ.. ನಮೋ ಆಪ್ ಅನ್ನು ಹೇಗೆ ಹಾಕಿಕೊಳ್ಲಬೇಕು ಎನ್ನುವುದನ್ನು ಟ್ವಿಟ್ಟಿಗರೊಬ್ಬರು ಸವಿಸ್ತಾರವಾಗಿ ಹಾಕಿದ್ದಾರೆ.