Saturday, November 23, 2024
ಹೆಚ್ಚಿನ ಸುದ್ದಿ

28 ವರ್ಷ ಮಗನನ್ನು ಕೋಣೆಯಲ್ಲಿ ಕೂಡಿಹಾಕಿದ ತಾಯಿ! – ಕಹಳೆ ನ್ಯೂಸ್

ಸ್ಟಾಕ್​ಹೋಮ್​ : ಆತ ಇನ್ನೂ ಚಿಕ್ಕ ಬಾಲಕ. ಆಗತಾನೇ ಪ್ರೈಮರಿ ಮುಗಿಸಿದ್ದ 13ರ ಹರೆಯದ ಬಾಲಕ. ಅದೇನು ಕಾರಣವೋ ತಿಳಿದಿಲ್ಲ. ಅದೊಂದು ದಿನ ಆತನ ತಾಯಿ ಮಗನನ್ನು ಕೋಣೆಯಲ್ಲಿ ಕೂಡಿಹಾಕಿಬಿಟ್ಟಳು.

ದಿನಗಳು ಉರುಳಿ… ವರ್ಷಗಳು ಉರುಳಿದರೂ ಮಗ ಮಾತ್ರ ಅದೇ ಕೋಣೆಯಲ್ಲಿಯೇ ಬಂಧಿಯಾಗಿದ್ದ…. ಇದೀಗ ಆ ಬಾಲಕ 41 ವರ್ಷದ ವ್ಯಕ್ತಿ! ಆದರೆ ಅದೇ ಕೋಣೆ, ಅದೇ ಬಂಧನ… ಅಂದರೆ 28 ವರ್ಷ ಅದೇ ಕೋಣೆಯಲ್ಲಿ ಬಂಧಿಯಾಗಿದ್ದ ಆ ಬಾಲಕ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂಥದ್ದೊಂದು ಘೋರ ದುರಂತ ನಡೆದಿರುವುದು ಸ್ವೀಡನ್​ ದೇಶದ ರಾಜಧಾನಿ ಸ್ಟಾಕ್​ಹೋಮ್​ನಲ್ಲಿ. ಇದೀಗ 70 ವರ್ಷದ ವೃದ್ಧೆಯಾಗಿರುವ ತಾಯಿ ತನ್ನ ಯೌವನದ ದಿನಗಳಲ್ಲಿ ಇಂಥದ್ದೊಂದು ಕೃತ್ಯ ಎಸಗಿದ್ದು, ಕಾರಣ ಮಾತ್ರ ನಿಗೂಢವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಬಂಧಿಕರೊಬ್ಬರು ದಿಢೀರನೆ ಮನೆಗೆ ಭೇಟಿ ನೀಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾನೂನುಬಾಹಿರವಾಗಿ ಕೂಡಿ ಹಾಕಿ ಆತನಿಗೆ ಚಿತ್ರಹಿಂಸೆ ನೀಡಿರುವುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಇವರ ಮೇಲೆ ಯಾರೂ ಹೋಗಿ ಬರುತ್ತಿರಲಿಲ್ಲ. ಆದರೆ ಅಚಾನಕ್​ ಆಗಿ ನಿನ್ನೆ ಸಂಬಂಧಿಯೊಬ್ಬರು ಮನೆಗೆ ಬಂದುಬಿಟ್ಟಿದ್ದಾರೆ. ಮುಖ್ಯದ್ವಾರ ಬೀಗ ಹಾಕಿರಲಿಲ್ಲ. ಮಹಿಳೆ ಅಲ್ಲೇ ಸಮೀಪ ಎಲ್ಲೋ ಹೋಗಿದ್ದರು. ಸಂಬಂಧಿಕರು ಮನೆಯೊಳಕ್ಕೆ ಪ್ರವೇಶಿಸಿದ್ದಾರೆ.

ಅಲ್ಲಿಯೇ ಇನ್ನೊಂದು ಕೋಣೆಯಿದ್ದು ಮಹಿಳೆ ಅಲ್ಲಿಯೇ ಇರಬಹುದು ಎಂದು ನೋಡಿದ್ದಾರೆ. ಆ ಕೋಣೆಯ ಹತ್ತಿರ ಹೋಗುತ್ತಿದ್ದಂತೆ ಮೂತ್ರ, ಕೊಳಕು ವಾಸನೆ ಬಡಿಯಿತು. ಕೂಡಲೇ ಅವರು ಆ ಕೋಣೆಯಲ್ಲಿ ತೆರೆದು ನೋಡಿದ್ದಾರೆ. ಅದರಲ್ಲಿ ಸಿಕ್ಕಾಪಟ್ಟೆ ಧೂಳು ತುಂಬಿತ್ತು. ಅಲ್ಲದೆ ಕೊಳೆತ ವಾಸನೆಯಿಂದಾಗಿ ಉಸಿರಾಡುವುದು ಸಹ ಕಷ್ಟವಾಗಿತ್ತು ಎಂದು ಅವರ ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ.

ನಾನು ಕೋಣೆಯನ್ನು ಪ್ರವೇಶಿಸುತ್ತಿದ್ದಂತೆಯೇ ಕೆಟ್ಟ ವಾಸನೆ ಬಡಿಯಿತು. ಬ್ಲಾಂಕೆಟ್ ಹಾಗೂ ದಿಂಬುಗಳ ಮೇಲೆ ಕುಳಿತಿದ್ದ ವ್ಯಕ್ತಿಯನ್ನು ಕಂಡೆ. ಅವನಿಗೆ ಹಲ್ಲುಗಳಿರಲಿಲ್ಲ, ಕಾಲುಗಳ ಮೇಲೆ ಗಾಯಗಳಿದ್ದವು. ನಿಧಾನವಾಗಿ ಮಾತನಾಡುತ್ತಿದ್ದ. ಬಳಿಕ ವೇಗವಾಗಿ ಏನೇನೋ ಮಾತನಾಡುತ್ತಿದ್ದ. ನೋಡಿ ಒಮ್ಮೆಲೆ ಹೆದರಿಕೆಯಾಯಿತು. ಆಮೇಲೆ ಆತ ಹುಚ್ಚನಂತೆ ಏನೇನೋ ಬಡಬಡಿಸುತ್ತಲೇ ವಿಷಯ ತಿಳಿಸಿದ ಎಂದು ಮಹಿಳೆ ಪೊಲೀಸರಿಗೆ ಹೇಳಿದ್ದಾರೆ.

ಅಧಿಕಾರಿಗಳು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ತಾಯಿ, ಮಗ ಹಾಗೂ ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗುತ್ತಿದೆ. ಬಳಿಕ ನೈಜ ಕಾರಣ ಏನೆಂದು ತಿಳಿಯಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಆದರೆ ಆತನ ತಾಯಿ ಮಾತ್ರ ನಾನು ಏನೂ ತಪ್ಪು ಮಾಡೇ ಇಲ್ಲ ವಾದಿಸುತ್ತಿದ್ದಾಳೆ. ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ