Saturday, November 23, 2024
ಹೆಚ್ಚಿನ ಸುದ್ದಿ

ಮುಂದಿನ ಬಜೆಟ್ ನಲ್ಲಿ ಭಾರತದ ಅಭಿವೃದ್ಧಿ ದರ ಹೆಚ್ಚಿಸಲು ಗಮನ : ನಿರ್ಮಲಾ ಸೀತಾರಾಮನ್ – ಕಹಳೆ ನ್ಯೂಸ್

ನವದೆಹಲಿ : ಮುಂದಿನ ಕೇಂದ್ರ ಬಜೆಟ್ ಭಾರತದ ಅಭಿವೃದ್ಧಿ ದರವನ್ನು ಹೆಚ್ಚಿಸುವತ್ತ ಗಮನ ಹರಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಭಾರತದ ಅರ್ಥ ವ್ಯವಸ್ಥೆ 2021-22ರಲ್ಲಿ ಪ್ರಗತಿ ಸಾಧಿಸಲಿದ್ದು, ಮುಂದಿನ ಫೆಬ್ರವರಿಯಲ್ಲಿ ಬಜೆಟ್ ನಲ್ಲಿ ಹೆಚ್ಚಿನ ವೆಚ್ಚ ಮಾಡುವ ಮೂಲಕ ಮುಂದಿನ 4-5 ವರ್ಷಗಳಲ್ಲಿ ಇನ್ನಷ್ಟು ಬಲಿಷ್ಠ ಬೆಳವಣಿಗೆಗೆ ಅಡಿಪಾಯ ಹಾಕಲಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ. ‘2021-22 ಬಹಳ ದೊಡ್ಡ, ಉತ್ತಮ ಟ್ರ್ಯಾಕ್ಷನ್ ವರ್ಷವಾಗಿದ್ದು, ನಿಜವಾಗಿಯೂ ಉತ್ತಮ ಪ್ರಗತಿ ಯನ್ನು ಸಾಧಿಸಲು 4-5 ವರ್ಷಗಳ ಕಾಲ ಉತ್ತಮ ವೇಗದಲ್ಲಿ ಬೆಳವಣಿಗೆ ಹೊಂದಲಿದೆ, ಬಜೆಟ್ ನಲ್ಲಿ ನಾವು ಸಾಕಷ್ಟು ಖರ್ಚು ಮಾಡುತ್ತೇವೆ ಮತ್ತು ಮೂಲಸೌಕರ್ಯಕ್ಕೆ ಖರ್ಚು ಮಾಡುತ್ತೇವೆ’ ಎಂದು ವರದಿಯು ಹೇಳಿದೆ.
ಅಮೆರಿಕ, ಜಪಾನ್ ಮತ್ತು ಯುನೈಟೆಡ್ ಕಿಂಗ್ಡಮ್ ನಂತಹ ದೇಶಗಳು ಪರಿಹಾರ ಕಾರ್ಯಗಳಿಗಾಗಿ ಶತಕೋಟಿ ಡಾಲರ್ ಗಳನ್ನು ಖರ್ಚು ಮಾಡಿವೆ. ಆದರೆ, ಸೀಮಿತ ಸಂಪನ್ಮೂಲಗಳ ಕಾರಣ ಭಾರತ ಸರ್ಕಾರ ತನ್ನ ಬಜೆಟ್ ಕೊರತೆಯನ್ನು ತಡೆಯಲು ಮುಂದಾಗಿದೆ. ಮುಂಬರುವ ತಿಂಗಳುಗಳಲ್ಲಿ ದೇಶದ ಅಭಿವೃದ್ಧಿ ದರವನ್ನು ಹೆಚ್ಚಿಸಲು ಸರ್ಕಾರ ವು ಖರ್ಚು ವೆಚ್ಚಗಳನ್ನು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು