Monday, January 20, 2025
ಬೆಳ್ತಂಗಡಿ

ನಾಳೆ ಕುರಾಯ ಖಂಡಿಗದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ-ಕಹಳೆ ನ್ಯೂಸ್

ಬೆಳ್ತಂಗಡಿ: ಶಿವ ಫ್ರೆಂಡ್ಸ್ ಕುರಾಯ ಖಂಡಿಗ ಹಾಗೂ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಬೆಳ್ತಂಗಡಿ ಇದರ ಸಹಬಾಗಿತ್ವದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ನಾಳೆ ರಾತ್ರಿ 7 ಗಂಟೆಗೆ ಕುರಾಯ ಖಂಡಿಗದಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕರಾದ ಸುಂದರ ಗೌಡ ಖಂಡಿಗ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಇಳಂತಿಲ ಕ್ಷೇತ್ರ ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಬೆಳ್ತಂಗಡಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಗೌಡ ಕೈಕುರೆ, ಬೆಳ್ತಂಗಡಿ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕರಾದ ಸಂದೇಶ್ ಪಿ.ಜಿ, ಪದ್ಮುಂಜ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಶೆಟ್ಟಿ ಪಣೆಕ್ಕರ, ಬಂದಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ದಿನೇಶ್ ಗೌಡ ಖಂಡಿಗ ವಹಿಸಲಿದ್ದಾರೆ.
ಬಹುಮಾನಗಳ ಪ್ರಯೋಜಕರು :
ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ಪ್ರಥಮ ಬಹುಮಾನ ವಿಜೇತರಿಗೆ 5555 ರೂ. ಹಾಗೂ ಶಾಶ್ವತ ಫಲಕಕ್ಕೆ ಉಜಿರೆ ಮಾರುತಿ ಜನರೇಟರ್ಸ್ ನ ಮಾಲಕರಾದ ಲೋಕೇಶ್ ಗೌಡ ನಾವುಳೆ ಹಾಗೂ ಮನೋಜ್ ಗೌಡ ನಾವುಳೆ ಬಹುಮಾನದ ಪ್ರಯೋಜಕರಾಗಿದ್ದಾರೆ.
ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ದ್ವಿತೀಯ ಬಹುಮಾನ ವಿಜೇತರಿಗೆ 3555 ರೂ. ಹಾಗೂ ಶಾಶ್ವತ ಫಲಕಕ್ಕೆ ಬಂದಾರು ಸೇವಾ ಪ್ರತಿನಿಧಿ ನಿರಂಜನ ಗೌಡ ಹಾಗೂ ಚಂದಪ್ಪ ಗೌಡ ಸುಣ್ಣಾನ ಮತ್ತು ಮನೆಯವರು ಬಹುಮಾನದ ಪ್ರಯೋಜಕರಾಗಿದ್ದಾರೆ.
ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ತೃತೀಯ ಬಹುಮಾನ ವಿಜೇತರಿಗೆ 2555 ರೂ. ಹಾಗೂ ಶಾಶ್ವತ ಫಲಕ ಕ್ಕೆ ಉಪ್ಪಿನಂಗಡಿ ಮನೋಹರ್ ಗೌಡ ನಾವುಳೆ ಬಹುಮಾನದ ಪ್ರಯೋಜಕರಾಗಿದ್ದಾರೆ.
ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ಚತುರ್ಥ ಬಹುಮಾನ ವಿಜೇತರಿಗೆ 1555 ರೂ. ಹಾಗೂ ಶಾಶ್ವತ ಫಲಕ ಕ್ಕೆ ಬೈಪಾಡಿ ಅಚಿಂತ್ಯ ಚಿಕನ್ ಸೆಂಟರ್ ನ ಜಯ ಮುರ್ತಾಜೆ ಬಹುಮಾನದ ಪ್ರಯೋಜಕರಾಗಿದ್ದಾರೆ.
ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ವಿಜೇತರ ಟ್ರೋಫಿಗೆ ಶಿವ ಗಣೇಶ್ ಬ್ರದರ್ಸ್ ಮುರ್ತಾಜೆ ಬಹುಮಾನದ ಪ್ರಯೋಜಕರಾಗಿದ್ದಾರೆ.
ವಾಲಿಬಾಲ್ ನೆಟ್‍ಗೆ ಪುತ್ತಿಲ ಭರತ್ ಗೌಡ ವಾಲಿಬಾಲ್ ಕಂಬ 2 ಜೆ.ಸಿ.ಐ ಅರ್ಥ್‍ಮೂವರ್ಸ್ ನ ಪ್ರಮೋದ್ ಕುರಾಯ ಹಾಗೂ ಬಾಲ್ 4 ಕುಶಾಲಪ್ಪ ಗೌಡ ಕೆದಿಲ, ಸುಂದರ ಗೌಡ ಕುರಾಯ, ಚಿದಾನಂದ ಗೌಡ ಕುರಾಯ ಪ್ರಯೋಜಕರಾಗಿದ್ದಾರೆ.
ಇನ್ನು ತುಂಬು ಹೃದಯದ ಸಹಕಾರವನ್ನು ನಿರುಂಬುಡ ಸದಾಶಿವ ಶಾಮಿಯಾನದ ಪ್ರಶಾಂತ್ ಗೌಡ, ಶಿವಸಾಯಿ ಸೌಂಡ್ಸ್ ಮತ್ತು ಲೈಟಿಂಗ್ಸ್‍ನ ದಿನೇಶ ಗೌಡ ಪುತ್ತಿಲ ಹಾಗೂ ಪ್ರಶಾಂತ್ ಗೌಡ ನೀಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಪ್ರೀತಿ ಪೂರ್ವಕವಾಗಿ ಆಗಮಿಸುವ ಎಲ್ಲಾ ಕ್ರೀಡಾಭಿಮಾನಿಗಳಿಗೆ ಆದರದ ಸ್ವಾಗತವನ್ನು ಶಿವ ಫ್ರೆಂಡ್ಸ್ ಕುರಾಯ ಬಂದಾರು ಅಧ್ಯಕ್ಷಕರು ಹಾಗೂ ಸರ್ವ ಸದಸ್ಯರು ಬಯಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು