Monday, January 20, 2025
ಹೆಚ್ಚಿನ ಸುದ್ದಿ

ಮಾಣಿ ಮೈಸೂರು ಹೆದ್ದಾರಿಯ ಕೊಡಾಜೆಯಲ್ಲಿ ರಿಡ್ಸ್ ಹಾಗೂ ವ್ಯಾಗನಾರ್ ಕಾರುಗಳ ನಡುವೆ ಭೀಕರ ಅಪಘಾತ-ಕಹಳೆ ನ್ಯೂಸ್

ವಿಟ್ಲ: ರಿಡ್ಸ್ ಹಾಗೂ ವ್ಯಾಗನಾರ್ ಕಾರುಗಳ ನಡುವೆ ಅಪಘಾತ ಸಂಭವಿಸಿ ವ್ಯಾಗನಾರ್ ಕಾರಿನ ಚಾಲಕ ನಯಾಜ್ ಗಂಭೀರ ಗಾಯಗೊಂಡಿದ್ದು, ಸಂಬಂಧಿಗಳಾದ ಸಫಾ ಹಾಗೂ ಚಿಕ್ಕ ಮಗು ಸಣ್ಣಪುಟ್ಟ ಗಾಯಗೊಂಡ ಘಟನೆ ಮಾಣಿ ಮೈಸೂರು ಹೆದ್ದಾರಿಯ ಕೊಡಾಜೆಯಲ್ಲಿ ಗುರುವಾರ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಣಿ ಮೂಲದವರಾದ ಇವರು ನೇರಳಕಟ್ಟೆ ಮದುವೆ ಹಾಲ್ ನಿಂದ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ವ್ಯಾಗನಾರ್ ಕಾರಿನಲ್ಲಿ ಹಿಂತಿರುಗುತ್ತಿದ್ದ ವೇಳೆ ಮಾಣಿ ಕಡೆಯಿಂದ ಬಂದ ರಿಡ್ಜ್ ಕಾರು ನಡುವೆ ಪೆರಾಜೆ ಶ್ರೀರಾಮಚಂದ್ರಾಪುರ ಮಠಕ್ಕೆ ತೆರಳುವ ರಸ್ತೆಯ ಮುಂಭಾಗದಲ್ಲಿ ಡಿಕ್ಕಿ ಹೊಡೆದ್ದರಿಂದ , ಈ ಎರಡೂ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು