ನವದೆಹಲಿ : ಭಾರತೀಯ ಆಹಾರ ಸುರಕ್ಷತಾ ಮಾನದಂಡ ಗಳ ಪ್ರಾಧಿಕಾರ (ಎಫ್ ಎಸ್ ಎಸ್ ಎಐ) ಹೊಸ ಮಾರ್ಗಸೂಚಿಗಳ ಪ್ರಕಾರ ಜನವರಿ 1ರಿಂದ ಅನ್ವಯವಾಗುವಂತೆ ಎಲ್ಲಾ ಪ್ಯಾಕೇಜಿಂಗ್ ನಲ್ಲಿ 20 ಮಿ.ಗ್ರಾಂ ಕ್ಯಾಲ್ಸಿಯಂ ಮತ್ತು 10 ಮಿಗ್ರಾಂ ಮೆಗ್ನೀಶಿಯಂ ಅನ್ನು ಎಲ್ಲಾ ಪ್ಯಾಕೇಜಿಂಗ್ ನಲ್ಲಿ ಸೇರಿಸುವಂತೆ ಎಲ್ಲಾ ಪ್ಯಾಕೇಜ್ಡ್ ವಾಟರ್ ತಯಾರಕರಿಗೆ ಸೂಚನೆ ನೀಡಿದೆ.
ಖನಿಜಗಳು ಆರೋಗ್ಯಕ್ಕೆ ಅತಿ ಮುಖ್ಯ ವೆಂದು ಪರಿಗಣಿಸಲ್ಪಟ್ಟಿರುವುದರಿಂದ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ) ಕೆಲವು ಖನಿಜಗಳನ್ನು ಪ್ಯಾಕೇಜ್ಡ್ ಕುಡಿಯುವ ನೀರಿನಲ್ಲಿ ಸೇರಿಸುವ ಸಾಧ್ಯತೆಯನ್ನು ಅನ್ವೇಷಿಸಲು FSSAI ಗೆ ಸೂಚಿಸಿತ್ತು. ನೀರನ್ನು ಸೋಸುವ ಪ್ರಕ್ರಿಯೆಯಲ್ಲಿ ತೆಗೆದ ಖನಿಜಗಳು ಮಾನವನ ಬಳಕೆಗೆ ಸುರಕ್ಷಿತವಾದ ವು- ಪ್ಯಾಕೇಜ್ಡ್ ಕುಡಿಯುವ ನೀರನ್ನು ಕುಡಿಯುವ ಗ್ರಾಹಕರ ಅನುಕೂಲಕ್ಕಾಗಿ ಮರುಸ್ಥಾಪಿಸಲಾಗುತ್ತದೆ ಎಂದು ಎನ್ ಜಿಟಿ ಹೇಳಿದೆ. ಮಾರುಕಟ್ಟೆಯಲ್ಲಿರುವ ಎಲ್ಲಾ ದೊಡ್ಡ ಕಂಪನಿಗಳಾದ ಕಿನ್ಲೆ, ಬೈಲಿ, ಅಕ್ವಿನಾ, ಹಿಮಾಲಯನ್, ರೈಲ್ ನೀರ್, ಆಕ್ಸಿರಿಚ್, ವೇದಿಕ ಮತ್ತು ಟಾಟಾ ವಾಟರ್ ಪ್ಲಸ್ ಈ ಪ್ರಕ್ರಿಯೆಯನ್ನು ಆರಂಭಿಸಿವೆ ಮತ್ತು ಡಿಸೆಂಬರ್ 2020ರ ಅಂತ್ಯದ ವೇಳೆಗೆ ಎಲ್ಲಾ ಪ್ರಮುಖ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರಾಂಡ್ ಗಳು ತಮ್ಮ ಬಾಟಲಿಗಳಲ್ಲಿ ಅಗತ್ಯವಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಅನ್ನು ಹೊಂದಿರುತ್ತವೆ.