ವಿಟ್ಲದಲ್ಲಿ ಹೆಚ್ಚುತ್ತಿದೆ ಹುಚ್ಚು ನಾಯಿಗಳ ಹಾವಳಿ, ಹುಚ್ಚು ನಾಯಿ ಹಿಡಿಯುವಲ್ಲಿ ಯಶಸ್ವಿಯಾದ ಫ್ರೆಂಡ್ಸ್ ವಿಟ್ಲ ಮುರಳೀಧರ ಅವರ ತಂಡ- ಕಹಳೆ ನ್ಯೂಸ್
ವಿಟ್ಲ: ವಿಟ್ಲ ಪರಿಸರದಲ್ಲಿ ಹುಚ್ಚು ನಾಯಿಯೊಂದು ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿಗೆ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ,
ಇವರುಗಳು ಚಂದಳಿಕೆ ನಿವಾಸಿ ಅಹರಾಜ್ , ಬೊಬ್ಬೆಕೇರಿ ನಿವಾಸಿ ಮೌಸೀಫ್, ಇರಾ ನಿವಾಸಿ ಮುಸ್ತಫಾ, ವಿಟ್ಲ ಕಸಬಾ ನಿವಾಸಿ ಅನಿರುದ್ಧು, ಕಡಂಬು ನಿವಾಸಿ ರಾಧಾಕೃಷ್ಣ, ಅಳಿಕೆ ನಿವಾಸಿ ಭಾಸ್ಕರ್, ಎಂಬುದು ತಿಳಿದು ಬಂದಿದೆ, ನಾಯಿ ಕಡಿತದಿಂದ ಗಾಯಗೊಂಡ ಅವರು ವಿಟ್ಲ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡ್ರು, ಆರು ಮಂದಿಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು, ಅವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಳಿದವರು ಸಣ್ಣಪುಟ್ಟ ಗಾಯಗೊಂಡಿದ್ದು, ವಿಟ್ಲದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ವಿಟ್ಲ ದೇವಸ್ಥಾನ ರಸ್ತೆಯಿಂದ ಬೊಬ್ಬೆಕೇರಿ ಮೂಲಕ ಬಂದ ಹುಚ್ಚು ನಾಯಿ ಪೇಟೆವರೆಗೆ ಓಡಾಡಿ ದಾರಿಯಲ್ಲಿ ಸಿಕ್ಕಿದವರಿಗೆಲ್ಲ ಕಚ್ಚಿ ಗಾಯಗೊಳಿಸಿದೆ. ತಕ್ಷಣವೇ ಕಾರ್ಯಾಚರಣೆಗೆ ಇಳಿದ ಫ್ರೆಂಡ್ಸ್ ವಿಟ್ಲ ತಂದ ಮುರಳೀಧರ ಅವರ ತಂಡ ಹುಚ್ಚು ನಾಯಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಅನೇಕ ಬೀದಿ ನಾಯಿಗಳಿಗೆ ಈ ನಾಯಿ ಕಚ್ಚಿದ್ದು, ಜನರಲ್ಲಿ ಆತಂಕ ಉಂಟು ಮಾಡಿದೆ