ಆರ್ಕಿಟೆಕ್ಚರ್‌ನಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮೊನಾ ಎಸ್. ಟಿ ಗೆ 174 ನೇ ರ‍್ಯಾಂಕ್ – ಕಹಳೆ ನ್ಯೂಸ್
ಪುತ್ತೂರು: ಆರ್ಕಿಟೆಕ್ಚರ್ ಇಂಜಿನಿಯರಿಂಗ್‍ಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ನವೆಂಬರ್ 27 ರಂದು ಬಿಡುಗಡೆ ಮಾಡಿದ ರಾಷ್ಟ್ರ ಮಟ್ಟದ ಫಲಿತಾಂಶದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಮೊನಾ ಎಸ್ ಟಿ 174 ನೇ ರ‍್ಯಾಂಕ್ ಗಳಿಸಿದ್ದಾರೆ.
ಇತ್ತೀಚೆಗೆ ನಡೆದ ನಾಟಾ ಮತ್ತು ಜೆಇಇ ಪೇಪರ್ 2 ಫಲಿತಾಂಶವನ್ನು ಪರಿಗಣಿಸಿ ಈ ರ‍್ಯಾಂಕ್ ನ್ನು ನೀಡಲಾಗಿದೆ. ಇವಳು ಹಾಸನದ ಅರಕಲಗೂಡಿನ ತಿಮ್ಮೆಗೌಡ ಮತ್ತು ಸುಮಿತ್ರ ದಂಪತಿಗಳ ಸುಪುತ್ರಿ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಅಭಿನಂದಿಸಿದ್ದಾರೆ.