Wednesday, January 22, 2025
ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ಸ್ಥಾಪಿಸಲಾದ ದತ್ತ್ತಿನಿಧಿ ವಿದ್ಯಾರ್ಥಿ ವೇತನ ಪ್ರಶಸ್ತಿಯನ್ನು ವಿತರಣಾ ಸಮಾರಂಭ-ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಕಾಲೇಜಿನಲ್ಲಿ ಸ್ಥಾಪಿಸಲಾದ ಶ್ರೀ ಉಮಾಮಹೇಶ್ವರ ದೇವರು ಪಡಾರು ದತ್ತಿನಿಧಿ, ದಿವಂಗತ ಬಡೆಕ್ಕಿಲ ಸೀತಾರಾಮ ಭಟ್ ಮತ್ತು ಲಕ್ಷ್ಮಿಅಮ್ಮ ಸ್ಮರಣಾರ್ಥ ದತ್ತಿನಿಧಿ ಹಾಗೂ ದಿವಂಗತ ಪಡೀಲ್ ಶಂಕರಭಟ್ ದತ್ತಿನಿಧಿ ಬಹುಮಾನವನ್ನು ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ದತ್ತ್ತಿನಿಧಿ ವಿದ್ಯಾರ್ಥಿ ವೇತನ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀನಿವಾಸ ಪೈ ಮಾತನಾಡುತ್ತಾ, ವಿದ್ಯಾರ್ಥಿಗಳ ವಿದ್ಯಾರ್ಜನೆಯ ಆಯ್ಕೆ ವಿಸ್ತಾರವಾಗಬೇಕು, ಮೆಡಿಕಲ್ ಮತ್ತು ಇಂಜಿನಿಯರಿಂಗ್ ಹೊರತಾಗಿ ಮೂಲ ವಿಜ್ಞಾನ ವಿಷಯಗಳ ಕುರಿತು ಆಸಕ್ತಿ ಮೂಡಬೇಕು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮೂಲ ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡುವಂತಹ ಪದವಿ ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಇದರ ಪ್ರಯೋಜನವನ್ನು ಹಲವು ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ ಎಂಬುದೇ ಸಂತೋಷದ ವಿಷಯ ಎಂದು ಹೇಳಿದರು. ಇವರು ವಿವೇಕಾನಂದ ಪದವಿ ಕಾಲೇಜಿನ ಐಕ್ಯೂಎಸಿ ಹಾಗೂ ವಿಜ್ಞಾನ ವಿಭಾಗದ ಸಹಯೋಗದಲ್ಲಿ ನಡೆದ ದತ್ತಿನಿಧಿ ವಿದ್ಯಾರ್ಥಿ ವೇತನ ಪ್ರಶಸ್ತಿ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಭ್ಯಾಗತರಾದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ ಎನ್ ಮಾತನಾಡಿ, ಸಮಾಜದಲ್ಲಿ ಜನರಿಗೆ ಹಣಗಳಿಸುವ ಆಸಕ್ತಿ ಇರುತ್ತದೆ, ಆದರೆ ಗಳಿಸಿದ ಹಣವನ್ನು ಸಮಾಜಕ್ಕೆ ವಿನಿಯೋಗಿಸುವ ಮನಸ್ಸು ಕೆಲವರಿಗೆ ಮಾತ್ರ ಇರುತ್ತದೆ. ಈ ಜಗತ್ತಿನಲ್ಲಿ ಅದೆಷ್ಟೋ ಬಡವರಿದ್ದಾರೆ, ವಿದ್ಯಾಭ್ಯಾಸ ಪಡೆಯದ ನಿರಾಶ್ರಿತರಿದ್ದಾರೆ, ಅವರ ಶ್ರೇಯೋಭಿವೃದ್ಧಿ ಪಡಿಸುವ ಅಗತ್ಯತೆ ಇದೆ. ಆ ನಿಟ್ಟಿನಲ್ಲಿ ವಿವೇಕಾನಂದ ಕಾಲೇಜಿನಲ್ಲಿ ಸ್ಥಾಪಿಸಿದ ಹಲವು ದತ್ತಿನಿಧಿಗಳು ವಿದ್ಯಾರ್ಥಿಗಳ ಬದುಕಿಗೆ ದಾರಿಯಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದತ್ತಿನಿಧಿ ವಿದ್ಯಾರ್ಥಿ ವೇತನವನ್ನು ಸುಶ್ಮಿತಾ ಕೆ ( ಸಂತಫಿಲೋಮಿನಾ ಕಾಲೇಜು), ಸಂಪತ್ (ಪಿಜಿ ಸೆಂಟರ್ ಮಂಗಳಗಂಗೋತ್ರಿ), ಶರತ್ (ವಿವೇಕಾನಂದ ಕಾಲೇಜು), ಅಶ್ಲೀನೆ ಝಿನಾ ಫೆನಾರ್ಂಡಿಸ್ (ಪಿಜಿ ಸೆಂಟರ್ ಮಂಗಳಗಂಗೋತ್ರಿ), ಯಶಸ್ವಿನಿ ಕೆ ಯಸ್ (ವಿವೇಕಾನಂದ ಕಾಲೇಜು), ತೇಜಶ್ರೀ ಎಂ (ವಿವೇಕಾನಂದ ಕಾಲೇಜು) ಇವರು ಪಡೆದುಕೊಂಡರು. ಹಾಗೆಯೇ ದಿವಂಗತ ಬಡೆಕ್ಕಿಲ ಸೀತಾರಾಮ್ ಭಟ್ ಮತ್ತು ಲಕ್ಷ್ಮಿ ಅಮ್ಮ ಸ್ಮರಣಾರ್ಥ ಕೊಡಲ್ಪಡುವ ದತ್ತಿನಿಧಿಯನ್ನು ವಿವೇಕಾನಂದ ಕಾಲೇಜಿನ ಮಾನಸ ಸರಸ್ವತಿ ಮತ್ತು ಪ್ರತೀಕ್ಷಾ ಪಡೆದುಕೊಂಡರು. ಅಂತಾರಾಷ್ಟ್ರೀಯ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕೊಡಲ್ಪಡುವ ದಿವಂಗತ ಪಡಲು ಶಂಕರ ಭಟ್ ದತ್ತಿನಿಧಿ ಜೋಯಿಲಿನ್ ಲವೀನ್ ಫಲೇರ (ಶ್ರೀ ವೆಂಕಟ್ರಮಣ ಸ್ವಾಮಿ ಕಾಲೇಜು, ಬಂಟ್ವಾಳ), ಮತ್ತು ಪ್ರೇಕ್ಷ ಶೆಟ್ಟಿ ( ಶ್ರೀ ವೆಂಕಟ್ರಮಣ ಸ್ವಾಮಿ ಕಾಲೇಜು, ಬಂಟ್ವಾಳ)ಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ದತ್ತಿನಿಧಿ ದಾನಿಗಳ ಪರವಾಗಿ ಶ್ರೀಕಾಂತ್ ಭಟ್ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಸೇಡಿಯಾಪು ಜನಾರ್ಧನ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಐಕ್ಯೂಎಸಿ ಸಂಯೋಜಕ ಶಿವಪ್ರಸಾದ ಸ್ವಾಗತಿಸಿ ಕಾಲೇಜಿನ ಪ್ರಾಂಶುಪಾಲ ವಿ.ಜಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣಿತಶಾಸ್ತ್ರ ಉಪನ್ಯಾಸಕಿ ನಮೃತಾ ಪ್ರಾರ್ಥಿಸಿ ರಸಾಯನಶಾಸ್ತ್ರ ಉಪನನ್ಯಾಸಕಿಯಾದ ರಚನಾ ವಂದಿಸಿ, ಮಾಲತಿ ನಿರೂಪಿಸಿದರು.