Wednesday, January 22, 2025
ಪುತ್ತೂರು

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು‌ ಇದರ 2019-2020ರ ವರ್ಚುವಲ್ ಕಾನ್ಫರೆನ್ಸ್ ಮೂಲಕ ವಾರ್ಷಿಕ ಸಾಮಾನ್ಯ ಸಭೆ-ಕಹಳೆ ನ್ಯೂಸ್

ಪುತ್ತೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ 2019-2020ರ ಸಾಲಿನ 34ನೇ ವಾರ್ಷಿಕ ಸಾಮಾನ್ಯ ಸಭೆಯು ವರ್ಚುವಲ್ ಕಾನ್ಫರೆನ್ಸ್ ಮೂಲಕ ಡಿಸೆಂಬರ್  5 ರಂದು ಮಂಗಳೂರಿನಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನಲ್ಲಿ ತೆಂಕಿಲ ದರ್ಶನ್  ಕಲಾ ಮಂದಿರದಲ್ಲಿ ಆನ್ ಲೈನ್ ಮೂಲಕ ಸಭೆಯನ್ನು ವೀಕ್ಷಣೆ ಮಾಡಿದರು. ಈ ಸಭೆಯಲ್ಲಿ ಪುತ್ತೂರು ತಾಲೂಕಿನ 89 ಮಂದಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರುಗಳು ಭಾಗವಹಿಸಿದ್ದರು. ಮತ್ತು ಕೆ.ಎಂಎಫ್ ನ ಉಪವ್ಯವಸ್ಥಾಪಕ ರಾಮಕೃಷ್ಣ ಭಟ್, ಡಾ.ಸತೀಶ್ ರಾವ್, ವಿಸ್ತರಣಾಧಿರಾರಿ ಯಮುನಾ, ಮಾಲತಿ, ಡೈರಿಯ ಪುಷ್ಪ ರಾಜ್, ಮತ್ತು ಶಿಬಿರ ಕಚೇರಿ ಸಿಬ್ಬಂದಿಗಳಾದ ಮಮತಾ, ವಿದ್ಯಾ, ತಾಂತ್ರಿಕ ವಿಭಾಗದ ಜಯಶ್ರೀ ,ಕಡಬದ ಪಶುವೈದ್ಯ ಡಾ.ಅಜಿತ್, ಉಪ್ಪಿನಂಗಡಿಯ ಡಾ.ಜಿತೇಂದ್ರ ಅವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು