Wednesday, January 22, 2025
ಪುತ್ತೂರು

ಶ್ರೀಮತಿ ವತ್ಸಲಾ ಅವರಿಗೆ ವಿವೇಕಾನಂದ ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಂಘದ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಪದವಿ ಕಾಲೇಜಿನ ಕಚೇರಿ ಸಹಾಯಕರಾಗಿದ್ದ ಶ್ರೀಮತಿ ವತ್ಸಲಾ ಅವರಿಗೆ ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಂಘದ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀನಿವಾಸ ಪೈ, ಸಂಚಾಲಕರಾದ ಮುರಳಿಕೃಷ್ಣ ಕೆ ಎನ್, ಕೋಶಾಧಿಕಾರಿ ಸೇಡಿಯಾಪು ಜರ್ನಾಧನ ಭಟ್, ಪ್ರಾಂಶುಪಾಲ ವಿಷ್ಣು ಗಣಪತಿ ಭಟ್ ಇವರುಗಳು ಶ್ರೀಮತಿ ವತ್ಸಲಾ ಅವರು ಸರಳ ಸಜ್ಜನಿಕೆ ಮತ್ತು ಪ್ರಾಮಾಣಿಕವಾದ ಕೆಲಸ ನಿರ್ವಹಣೆಯ ಕುರಿತು ಪ್ರಶಂಸಿ ಶುಭಾಶಯದ ಮಾತುಗಳನ್ನಾಡಿದರು.ಈ ಸಂದರ್ಭದಲ್ಲಿ ಶ್ರೀಮತಿ ವತ್ಸಲಾ ಅವರಿಗೆ ಶಾಲು ಹೊದಿಸಿ, ಹಾರಹಾಕಿ, ಫಲಪುಷ್ಟ ಮತ್ತು ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ವತ್ಸಲಾ ಅವರು ಎಲ್ಲರ ಪ್ರೀತಿಗೆ ಮತ್ತು ಕರ್ತವ್ಯ ಮಾಡುವ ಸಂದರ್ಭದ ನೀಡಿದ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾಲೇಜು ಕಚೇರಿ ಸಿಬ್ಬಂದಿ ಮೋಹನ ಎನ್ ಮತ್ತು ಶುಭಾ ಎಸ್ ರಾವ್ ಇವರು ವತ್ಸಲಾ ಅವರ ಜೊತೆಗೆ ಕೆಲಸ ನಿರ್ವಹಣೆಯ ಸಂದರ್ಭದ ಸಜ್ಜನಿಕೆಯ ಕುರಿತು ಮಾತನಾಡಿದರು. ಅಧ್ಯಾಪಕ ಸಂಘದ ಅಧ್ಯಕ್ಷ ಕೃಷ್ಣ ಕಾರಂತ ಸ್ವಾಗತಿಸಿ, ಅಧ್ಯಾಪಕೇತರ ಸಂಘದ ಅಧ್ಯಕ್ಷ ಎಮ್.ಎಸ್ ತೋಟರ್ ವಂದಿಸಿದರು. ರಾಜ್ಯಶಾಸ್ತ್ರ ವಿಭಾಗದ ಅನಿತಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು