Wednesday, January 22, 2025
ಪುತ್ತೂರು

ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ ಸಂಸ್ಕøತಿ-ಪ್ರಸ್ತುತಿ ಎಂಬ ಐದನೇ ಸರಣಿ ಸಂವಾದ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು; ತಂತ್ರಜ್ಞಾನ ಎನ್ನುವುದು ಇಂದು ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಎಲ್ಲಾ ಮಾಹಿತಿಗಳನ್ನು ಡಿಜಿಟಲ್ ಆಗಿ ಮಾರ್ಪಡಿಸುವ ಸಾಮಥ್ರ್ಯವನ್ನು ಒಳಗೊಂಡಿದೆ ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಸರಸ್ವತಿ ಹೇಳಿದರು.

ಇವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ ಸಂಸ್ಕøತಿ-ಪ್ರಸ್ತುತಿ ಎಂಬ ಐದನೇ ಸರಣಿ ಸಂವಾದ ಕಾರ್ಯಕ್ರಮದಲ್ಲಿ ನಿತ್ಯ ವ್ಯವಹಾರದಲ್ಲಿ ಡಿಜಿಟಲ್ ಬಳಕೆ ಹಾಗೂ ದೇಶದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ತೆರಿಗೆ ಮಹತ್ವ ಎಂಬ ವಿಚಾರದ ಬಗೆಗೆ ಸಮನ್ವಯಕಾರರಾಗಿ ಮಾತಾನಾಡಿ, ಇಂದು ನಮ್ಮ ಎಲ್ಲಾ ವ್ಯವಹಾರಗಳು ತಂತ್ರಜ್ಞಾನದ ಮೂಲಕವೇ ನಡೆಯುತ್ತಿದೆ. ಇದರಿಂದ ಸಮಯದ ಉಳಿತಾಯವಲ್ಲದೇ ನಮ್ಮ ಎಲ್ಲಾ ಕೈಂಕರ್ಯಗಳು ಸುಲಭವಾಗಿ ನೆರವೇರುತ್ತಿದೆ ಎಂದರು. ಅಂತೆಯೇ ದೇಶದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ತೆರಿಗೆ ಮಹತ್ವ ಎಂಬ ವಿಚಾರದ ಬಗೆಗೂ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾ, ಭಾರತ ದೇಶದ ಪ್ರಜೆಯಾಗಿ ನಾವೆಲ್ಲರು ನಮ್ಮ ದೇಶದ ಆರ್ಥಿಕ ದೃಷ್ಟಿಯಿಂದ ಕಡ್ಡಾಯವಾಗಿ ತೆರಿಗೆ ಪಾವತಿಯನ್ನು ಮಾಡಬೇಕು. ಇದರಿಂದ ನಮ್ಮ ದೇಶ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ಶ್ರೀಮತಿ ಸುಚಿತ್ರಾ ಇವರು ನಿತ್ಯ ವ್ಯವಹಾರದಲ್ಲಿ ಡಿಜಿಟಲ್ ಬಳಕೆ ಎಂಬ ವಿಚಾರದ ಬಗೆಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿ, ಇಂದು ಡಿಜಿಟಲ್ ಸಿಸ್ಟಂ ಎಲ್ಲಾ ಕ್ಷೇತ್ರಗಳಲ್ಲಿ ಕಾಲಿಟ್ಟಿದ್ದು ಮಾತ್ರವಲ್ಲದೇ ದೇಶದ ಅಭಿವೃದ್ಧಿಗೂ ಸಹಾಯವಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಆಂಕಿತಾ ಇವರು ದೇಶದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ತೆರಿಗೆ ಮಹತ್ವ ಎಂಬ ವಿಚಾರದ ಬಗೆಗೆ ಮಾತನಾಡಿ ತೆರಿಗೆ ಪಾವತಿಯು ಸರ್ಕಾರದ ಎಲ್ಲಾ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಇರುವ ಪ್ರಾಥಮಿಕ ಮೂಲವಾಗಿದೆ. ಹಾಗಾಗಿ ಆದಾಯ ತೆರಿಗೆಯನ್ನು ನಾವು ಪಾವತಿ ಮಾಡಲೇಬೇಕು ಎಂದರು.
ಕಾರ್ಯಕ್ರಮಕ್ಕೆ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಚಳ್ಳಂಗಾರು ಹಾಗೂ ಕಾಲೇಜಿನ ಐಕ್ಯೂಎಸಿ ಸಂಯೋಜಕ ಶಿವಪ್ರಸಾದ್ ಇವರು ಶುಭಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಫ್ರೋ.ವಿ.ಜಿ ಭಟ್, ಸಮನ್ವಯಕಾರರಾದ ಡಾ.ವಿಜಯ ಸರಸ್ವತಿ, ಉಪನ್ಯಾಸಕಿಯರಾದ ಶ್ರೀಮತಿ ಅಂಕಿತಾ, ಶ್ರೀಮತಿ ಸುಚಿತ್ರಾ ಉಪಸ್ಥಿತರಿದ್ದರು. ಗಣಕ ಶಾಸ್ತ್ರ ವಿಭಾಗದ ಉಪನ್ಯಾಸಕ ವಿಕ್ರಾಂತ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು