Saturday, November 23, 2024
ಪುತ್ತೂರು

ಪುತ್ತೂರು : ಅಕ್ರಮ ಮರ ಸಾಗಾಟ ಪತ್ತೆ; ಆರೋಪಿಗಳು ಪರಾರಿ; ಅರಣ್ಯಧಿಕಾರಿಗಳ ಭರ್ಜರಿ ಭೇಟೆ- ಕಹಳೆ ನ್ಯೂಸ್

ಪುತ್ತೂರು: ಪುತ್ತೂರು -ಪಾಣಾಜೆ ರಸ್ತೆಯ ಕೈಕಾರ ಎಂಬಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಮರಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದ್ದು , ಆರೋಪಿಗಳು ಪರಾರಿಯಾದ ಘಟನೆ ಡಿ. 5 ರಂದು ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ವೇಳೆ ಗಸ್ತಿನಲ್ಲಿದ್ದ ಪಾಣಾಜೆ ಅರಣ್ಯ ರಕ್ಷಕ ಮೋಹನ್, ರಾಜುಚಂದ್ರ, ಉಮೇಶ್ ಕೆ ಜಿ, ಅರಣ್ಯ ವೀಕ್ಷಕರಾದ ದೇವಪ್ಪ ನಾಯ್ಕ, ವಿನೋದ್ ರವರು ಲಾರಿಯನ್ನು ತಡೆದು ನಿಲ್ಲಿಸಿದ್ದಾರೆ. ಲಾರಿಯಲ್ಲಿ ವಿವಿಧ ಜಾತಿಯ 62 ದಿಮ್ಮಿಗಳನ್ನು ಮುಟ್ಟುಗೋಲು ಹಾಕಲಾಗಿದೆ. ವಶಕ್ಕೆ ಪಡೆದ ಸೊತ್ತುಗಳ ಒಟ್ಟು ಮೌಲ್ಯ ರೂ. 4 ಲಕ್ಷ ಎಂದು ಅಂದಾಜಿಸಲಾಗಿದೆ. ಮುಂದಿನ ತನಿಖೆಯನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಾಲನ್, ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ ಪಿ ಕಾರ್ಯಪ್ಪ ನಿದೇರ್ಶನದಂತೆ ಪುತ್ತೂರು ವಲಯಾರಣ್ಯಾಧಿಕಾರಿ ಸುಬ್ಬಯ್ಯ ರವರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು